‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್ ಫ್ಯಾನ್ಸ್‌ಗೆ ಸಿಹಿ ಸುದ್ದಿ, ರಿಲೀಸ್ ಡೇಟ್ ಅನೌನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೋಜ್ ಬಾಜ್‌ಪಾಯಿ ನಟನೆಯ ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ನ ಮೂರನೇ ಸೀಸನ್ ಇನ್ನೇನು ಸಧ್ಯದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಈ ಬಗ್ಗೆ ಸ್ವತಃ ಮನೋಜ್ ಅಪ್‌ಡೇಟ್ ನೀಡಿದ್ದಾರೆ. ಎರಡೂ ಸೀಸನ್‌ಗಳು ಸೂಪರ್ ಹಿಟ್ ಆಗಿದ್ದು, ಮೂರನೇ ಸೀಸನ್ ಯಾವಾಗ ಬರುತ್ತದೆ ಎಂದು ಫ್ಯಾನ್ಸ್ ಕಾದು ಕುಳಿತಿದ್ದರು. ಇದಕ್ಕೆ ಮನೋಜ್ ಅವರೇ ಉತ್ತರ ನೀಡಿದ್ದು, ಹೋಳಿ ಹಬ್ಬದ ದಿನ ಅಂದರೆ ಮಾರ್ಚ್ 8 ರಂದು ನಿಮ್ಮ ಮುಂದೆ ಬರಲಿದ್ದೇವೆ ಎಂದಿದ್ದಾರೆ.

ಸೀಸನ್ ಎರಡರಲ್ಲಿ ಸೀಸನ್ ಮೂರಕ್ಕೆ ಯಾವ ರೀತಿ ಸ್ಟೋರಿ ಲೈನ್ ಇರುತ್ತದೆ ಎನ್ನುವುದನ್ನು ತಂಡ ಆಗಲೇ ಹೇಳಿತ್ತು, ವೈರಸ್ ರಿಲೇಟೆಡ್ ಸೀಸನ್ ಇದಾಗಿರಲಿದೆ ಎಂದು ಮುಂಚೆಯೇ ಹೇಳಿದ್ದು, ಇದೀಗ ಸೀಸನ್ ೩ ಆರಂಭವಾಗಲಿದೆ. ಹೋಳಿ ಹಬ್ಬದ ದಿನದಂದು ನಿಮ್ಮ ಮುಂದೆ ಬರಲಿದ್ದೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!