ಪಿ ವಿ ಸಿಂಧು ಮುಡಿಗೆ ಸೈಯದ್ ಮೋದಿ ಇಂಟರ್​ನ್ಯಾಷನಲ್ ಟ್ರೋಫಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೈಯದ್ ಮೋದಿ ಇಂಟರ್​ನ್ಯಾಷನಲ್​ ಟೂರ್ನಿಯ ಚಾಂಪಿಯನ್ ನ ಫೈನಲ್ ನಲ್ಲಿ ಪಿ ವಿ ಸಿಂಧು ಗೆಲುವು ಸಾಧಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತದವರೇ ಆದ ಮಾಳವಿಕ ಬನ್ಸೋಡ್​ ವಿರುದ್ಧ ಸಿಂಧು 21-13, 21-16ರಲ್ಲಿ ಗೆಲುವು ಸಾಧಿಸಿದ್ದಾರೆ.
ಏಕಮುಖವಾಗಿದ್ದ ಫೈನಲ್ ಪಂದ್ಯವು ಕೇವಲ 35 ನಿಮಿಷಗಳಲ್ಲೇ ಮುಕ್ತಾಯಗೊಂಡಿತ್ತು. ಎರಡೂ ಸೆಟ್​ಗಳಲ್ಲೂ ಮಾಳವಿಕ ವಿರುದ್ಧ ಸಿಂಧು ಗೆಲುವು ಸಾದಿಸಿದರು.
ಸೆಮಿಫೈನಲ್​ ಪಂದ್ಯದಲ್ಲಿ ರಷ್ಯಾದ ಇವ್ಗೇನಿಯಾ ಕೊಸೆತ್ಸ್ಕಾಯಾ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು. ಇನ್ನೊಂದೆಡೆ ಮಾಳವಿಕ ಬನ್ಸೋಡ್​ ಸೆಮಿಫೈನಲ್​ನಲ್ಲಿ ತಮ್ಮ ಸಹವರ್ತಿ 16 ವರ್ಷದ ಅನುಪಮ ಉಪಾಧ್ಯಾಯ ವಿರುದ್ಧ 3 ಸೆಟ್​ಗಳ ಪಂದ್ಯದಲ್ಲಿ ಗೆಲುವು ಸಾಧಿಸಿ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!