ಹೊಸದಿಗಂತ ಡಿಜಿಟಲ್ ಡೆಸ್ಕ್:
41,000 ಕೋಟಿ ರೂ.ಗಳ ಮೌಲ್ಯದ 2,000 ಕ್ಕೂ ಹೆಚ್ಚು ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು.
ಬಳಿಕಮಾತನಾಡಿದ ಮೋದಿ, ಇದು ‘ನವ ಭಾರತದ’ ಕೆಲಸದ ಸಂಸ್ಕೃತಿಯ ಸಂಕೇತವಾಗಿದೆ ಎಂದು ಬಣ್ಣಿಸಿದರು.
ಈಗ, ಭಾರತವು ಅಭೂತಪೂರ್ವ ಪ್ರಮಾಣದಲ್ಲಿ ಅಭೂತಪೂರ್ವ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಆಕಾಂಕ್ಷೆಗಳಿಂದ ಬೇರ್ಪಟ್ಟು, ಇಂದಿನ ಭಾರತವು ದೊಡ್ಡ ಕನಸುಗಳನ್ನು ಕಾಣಲು ಮತ್ತು ಆ ಕನಸುಗಳನ್ನು ಆದಷ್ಟು ಬೇಗ ಸಾಕಾರಗೊಳಿಸುವತ್ತ ಸಾಗಿದೆ. ಸರ್ಕಾರದ ಮೂರನೇ ಅವಧಿಗೆ ಮರಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಇಂದು, ರೈಲ್ವೆಗೆ ಸಂಬಂಧಿಸಿದ ಎರಡು ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಅಡಿಪಾಯ ಹಾಕಲಾಗಿದೆ ಮತ್ತು ಉದ್ಘಾಟಿಸಲಾಗಿದೆ. ಇದೀಗ, ಈ ಸರ್ಕಾರದ ಮೂರನೇ ಅವಧಿ ಜೂನ್ ನಲ್ಲಿ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.