Saturday, December 10, 2022

Latest Posts

ಟಿ20 ರ‍್ಯಾಂಕಿಂಗ್: ಜೀವನಶ್ರೇಷ್ಠ ಸಾಧನೆ ಮಾಡಿ 2ನೇ ಸ್ಥಾನಕ್ಕೇರಿದ ಸೂರ್ಯಕುಮಾರ್​ ಯಾದವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಟಿ20 ರ‍್ಯಾಂಕಿಂಗ್​​​ ಪಟ್ಟಿಯಲ್ಲಿ ಏಷ್ಯಾಕಪ್​, ಆಸ್ಟ್ರೇಲಿಯಾ ಸರಣಿಯಲ್ಲಿ ಭರ್ಜರಿ ಬ್ಯಾಟ್​ ಬೀಸಿರುವ ಭಾರತದ ಸೂರ್ಯಕುಮಾರ್​ ಯಾದವ್​ 2ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಬುಧವಾರ ಐಸಿಸಿ ಬಿಡುಗಡೆ ಮಾಡಿದ ಬ್ಯಾಟ್ಸ್​ಮನಗಳ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್​ ಯಾದವ್​, ಪಾಕ್​ನ ಬಾಬರ್​ ಅಜಂ, ದಕ್ಷಿಣ ಆಫ್ರಿಕಾದ ಆ್ಯಂಡಂ ಮಾರ್ಕ್ರಮ್​ ಅವರನ್ನು ಹಿಂದಿಕ್ಕಿ 2 ಸ್ಥಾನ ಜಿಗಿತ ಕಂಡರು. ಪಾಕಿಸ್ತಾನದ ಮೊಹಮದ್​ ರಿಜ್ವಾನ್​ ಅಗ್ರಸ್ಥಾನದಲ್ಲಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಒಂದು ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ. ವಿರಾಟ್​ ಕೊಹ್ಲಿ ಕೂಡ 1 ಸ್ಥಾನ ಹೆಚ್ಚಿಸಿಕೊಂಡು 15 ನೇ ಸ್ಥಾನ ಪಡೆದಿದ್ದಾರೆ. ಬಾಬರ್​ ಅಜಂ ಕೆಲ ಪಂದ್ಯಗಳಲ್ಲಿ ವಿಫಲರಾದ ಕಾರಣ 1 ಸ್ಥಾನ ಕುಸಿದು 3 ಕ್ಕೆ ಇಳಿದಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಭಾರತದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ 11 ಸ್ಥಾನ ಹೆಚ್ಚಳ ಕಂಡು 18 ನೇ ಸ್ಥಾನಕ್ಕೆ ಪಡೆದರೆ, ಯಜುವೇಂದ್ರ ಚಹಲ್​ 6 ಸ್ಥಾನ ಏರಿ 26 ರಲ್ಲಿ ಕಾಣಿಸಿಕೊಂಡಿದ್ದಾರೆ. ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಬೌಲರ್​ ಭುನವೇಶ್ವರ್​ ಕುಮಾರ್​ 1 ಸ್ಥಾನ ಇಳಿದು 10ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಅಗ್ರಸ್ಥಾನದಲ್ಲಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್​ ಪಾಂಡ್ಯಾ 5 ನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!