ಟಿ20 ಸರಣಿ: ನ್ಯೂಜಿಲೆಂಡ್‌ ವಿರುದ್ಧ ಟೀಮ್ ಇಂಡಿಯಾದ ಗೆಲುವಿನ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ 65 ರನ್‌ ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್‌ ಇಂಡಿಯಾ 1-0 ಮುನ್ನಡೆ ಕಾಯ್ದುಗೊಂಡಿದೆ.

ಬೇ ಓವಲ್‌ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್‌ ಇಂಡಿಯಾ ಸೂರ್ಯಕುಮಾರ್‌ ಯಾದವ್‌ ಬಾರಿಸಿದ ಶತಕದ ನೆರವಿನಿಂದ 6 ವಿಕೆಟ್‌ಗೆ 191 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು.

ಪ್ರತಿಯಾಗಿ ನ್ಯೂಜಿಲೆಂಡ್‌ ತಂಡ 18.5 ಓವರ್‌ಗಳಲ್ಲಿ 126 ರನ್‌ ಗಳಿಸುವಷ್ಟೇ ಸೀಮಿತರಾದರು.
ನ್ಯೂಜಿಲೆಂಡ್‌ ಪರ ಫಿನ್‌ ಅಲೆನ್‌ ವಿಕೆಟ್‌ಅನ್ನು 2ನೇ ಎಸೆತದಲ್ಲಿಯೇ ಕಳೆದುಕೊಂಡಿತ್ತು. ಡೆವೋನ್‌ ಕಾನ್ವೆ (25) ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ (61) 2ನೇ ವಿಕಟ್‌ಗೆ 56 ರನ್‌ ಜೊತೆಯಾಟವಾಡಿದರೂ, ತಂಡದ ಬ್ಯಾಟಿಂಗ್‌ ನಿಧಾನಗತಿಯಲ್ಲಿತ್ತು. 22 ಎಸೆತಗಳಲ್ಲಿ 25 ರನ್‌ ಬಾರಿಸಿದ ಕಾನ್ವೆಯನ್ನು ವಾಷಿಂಗ್ಟನ್‌ ಸುಂದರ್‌ ಡಗ್‌ಔಟ್‌ಗೆ ಕಳಿಸಿದರೆ, 6 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್‌, ಬೌಂಡರಿಗಳಿದ್ದ 12 ರನ್‌ ಬಾರಿಸಿದ್ದ ಗ್ಲೆನ್‌ ಫಿಲಿಪ್ಸ್‌, ಚಾಹಲ್‌ ಎಸೆತದಲ್ಲಿ ಬೌಲ್ಡ್‌ ಆದರು.

ಬಳಿಕ ಡೇರಿಲ್‌ ಮಿಚೆಲ್‌ (10) ಅವರೊಂದಿಗೆ ಕೇನ್‌ ವಿಲಿಯಮ್ಸನ್‌ ಕೆಲ ಹೊತ್ತು ಆಡವಾಡಿದರು.88 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ 99 ರನ್‌ ಬಾರಿಸುವ ವೇಳೆಗೆ 6 ವಿಕೆಟ್‌ ಕಳೆದುಕೊಂಡಿತು. ಡೇರಿಲ್‌ ಮಿಚೆಲ್‌, ಜಿಮ್ಮಿ ನೀಶಾಮ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ವಿಕೆಟ್‌ ಕಳೆದುಕೊಂಡಿದ್ದರು. ನಾಯಕ ಕೇನ್‌ ವಿಲಿಯಮ್ಸನ್‌ 52 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ ಇದ್ದ 61 ರನ್‌ ಬಾರಿಸಿ ಮೊಹಮದ್‌ ಸಿರಾಜ್‌ಗೆ ಔಟಾದರು. ಡೇರಿಲ್‌ ಮಿಚೆಲ್‌ ವಿಕೆಟ್‌ ಉರುಳಿಸಿದ್ದ ದೀಪಕ್‌ ಹೂಡಾ, 19ನೇ ಓವರ್‌ನ ದಾಳಿಯಲ್ಲಿ, ಇಶ್‌ ಸೋಧಿ, ಟಿಮ್‌ ಸೌಥಿ ಹಾಗೂ ಆಡಂ ಮಿಲ್ನೆ ವಿಕೆಟ್‌ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಅದರೊಂದಿಗೆ 10 ರನ್‌ಗೆ 4 ವಿಕೆಟ್‌ ಉರುಳಿಸುವ ಮೂಲಕ ಕೂಡ ಗಮನಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!