ಟಿ- 20 ವಿಶ್ವಕಪ್‌ ಗೆ ವಿಶೇಷ ಜೆರ್ಸಿ ಅನಾವರಣ ಮಾಡಿದ ಆತಿಥೇಯ ರಾಷ್ಟ್ರ ಆಸ್ಟ್ರೇಲಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಾಲಿ ಟಿ 20 ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಮುಂದಿನ ಅಕ್ಟೋಬರ್-ನವೆಂಬರ್‌ ತಿಂಗಳಲ್ಲಿ ತವರಿನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ ಗೆ ವಿಶೇಷ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
ಅರಿಶಿಣ ವರ್ಣದ ಜೆರ್ಸಿ ಕಪ್ಪು ತೋಳುಗಳನ್ನು ಹೊಂದಿದೆ. ಜೆರ್ಸಿಯ ನಡು ಭಾಗದಲ್ಲಿ ಚಿನ್ನ ಮತ್ತು ಹಸಿರು ಬಣ್ಣದ ಚಿತ್ತಾಕರ್ಷಕ ವಿನ್ಯಾಸವಿದೆ.

ಈ ಕಿಟ್ ಅನ್ನು ಫಿಯೋನಾ ಕ್ಲಾರ್ಕ್ ಮತ್ತು ಕರ್ಟ್ನಿ ಹ್ಯಾಗನ್ ವಿನ್ಯಾಸಗೊಳಿಸಿದ್ದಾರೆ. ಆಸ್ಟ್ರೇಲಿಯಾದ ಮೊದಲ ರಾಷ್ಟ್ರ ಧ್ವಜದ ಬಣ್ಣಗಳನ್ನು ವಿನ್ಯಾಸವು ಸಂಯೋಜಿಸುತ್ತದೆ ಎಂದು ಹ್ಯಾಗನ್ ಹೇಳಿದ್ದಾರೆ.
ಕೆಂಪು, ಕಪ್ಪು ಮತ್ತು ಹಳದಿ ಬಣ್ಣಗಳು ಆಸ್ಟ್ರೇಲಿಯಾದ ಮೂಲನಿವಾಸಿಗಳ ಧ್ವಜವನ್ನು ಪ್ರತಿನಿಧಿಸುತ್ತದೆ ಮತ್ತು ನೀಲಿ, ಬಿಳಿ ಮತ್ತು ಹಸಿರು ಟೊರೆಸ್ ಸ್ಟ್ರೈಟ್ ಐಲ್ಯಾಂಡರ್ ಧ್ವಜವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದ್ದಾರೆ. ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಪುರುಷರ ಟಿ20 ವಿಶ್ವಕಪ್‌ ಆಯೋಜಿಸುತ್ತಿದೆ. ಆಸ್ಟ್ರೇಲಿಯಾ ಗ್ರೂಪ್ A ವಿಭಾಗದಲ್ಲಿ ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಎರಡು ಅರ್ಹತಾ ಸುತ್ತಿನಲ್ಲಿ ಗೆದ್ದುಬರುವ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಆರನ್ ಫಿಂಚ್ ನೇತೃತ್ವದ ತಂಡವು ಅಕ್ಟೋಬರ್ 22 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸುವ ಮೂಲಕ ತಮ್ಮ ಪ್ರಶಸ್ತಿ ಅಭಿಯಾನವನ್ನು ಪ್ರಾರಂಭಿಸಲಿದೆ.
ನವೆಂಬರ್ 9 ಮತ್ತು ನವೆಂಬರ್ 10 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯವನ್ನು ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಿಗದಿಪಡಿಸಲಾಗಿದೆ.
T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ:
ಆರನ್ ಫಿಂಚ್ (c), ಪ್ಯಾಟ್ ಕಮ್ಮಿನ್ಸ್ (vc), ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ , ಡೇವಿಡ್ ವಾರ್ನರ್, ಆಡಮ್ ಝಂಪಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!