ಅಭಿಮಾನಿಗಳ ಗಮನಕ್ಕೆ.. ಅಡಿಲೇಡ್‌ ನಲ್ಲಿ ಕಳೆದ 11 ಪಂದ್ಯ ಗೆದ್ದಿದ್ದು ಟಾಸ್‌ ಸೋತ ತಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
T20 ವಿಶ್ವಕಪ್‌ನಲ್ಲಿಂದು ಭಾರತಕ್ಕೆ ಅತ್ಯಂತ ಮಹತ್ವದ ದಿನ. 15 ವರ್ಷಗಳ ಬಳಿಕ ಮತ್ತೊಮ್ಮೆ ಟಿ 20 ವಿಶ್ವಕಪ್ ಗೆಲುವಿಗೆ ಎದುರು ನೋಡುತ್ತಿರುವ ಭಾರತ ಇಂದು ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಎದುರಿಸುತ್ತಿದೆ. ಇಂದಿನ ಪದ್ಯದಲ್ಲಿ ಗೆದ್ದ ತಂಡವು ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಫೈನಲ್‌ ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಟಾಸ್‌ ಸೂತ ಭಾರತವು ಬ್ಯಾಟಿಂಗ್‌ ಗೆ ಇಳಿದಿದೆ. ವಾಸ್ತವವಾಗಿ, ಟಾಸ್ ಸೋತ ಭಾರತಕ್ಕೆ ಫೈನಲ್‌ ಬಾಗಿಲು ತೆರೆಯಲಿದೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಈ ಪಂದ್ಯ ನಡೆಯುತ್ತಿರುವ ಅಡಿಲೇಡ್ ಓವೆಲ್‌ ಕ್ರೀಡಾಂಗಣದ ದಾಖಲೆಗಳು ಹೇಳುತ್ತಿದೆ. ಇದುವರೆಗೆ ನಡೆದ ಪಂದ್ಯಗಳ ದಾಖಲೆ ನೋಡಿದರೆ ಈ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ತಂಡಕ್ಕೆ ಪಂದ್ಯ ಗೆಲ್ಲುವು ಅದೃಷ್ಟವಿಲ್ಲರುವುದನ್ನು ಗಮನಿಸಬಹುದು.

ಟಾಸ್ ಸೋತ ತಂಡಕ್ಕೆ ಎಲ್ಲಾ ಪಂದ್ಯಗಳಲ್ಲಿ ಗೆಲುವು:
ಅಡಿಲೇಡ್‌ನಲ್ಲಿ 11 ಅಂತಾರಾಷ್ಟ್ರೀಯ ಪುರುಷರ ಟಿ20 ಪಂದ್ಯಗಳು ನಡೆದಿದ್ದು, ಟಾಸ್ ಸೋತ ತಂಡವೇ ಈ ಎಲ್ಲಾ 11 ಪಂದ್ಯಗಳನ್ನು ಗೆದ್ದಿದೆ. ಟಾಸ್ ಗೆದ್ದ ತಂಡಕ್ಕೆ ಇಲ್ಲಿ ಒಂದೂ ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ಈ ದಾಖಲೆಯನ್ನು ನೋಡಿದರೆ ಟಾಸ್ ಸೋಲು ಭಾರತಕ್ಕೆ ಅದೃಷ್ಟ ತಂದುಕೊಡಲಿದೆ ಎಂದೇ ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಭಾರತ ಗೆದ್ದು ಫೈನಲ್‌ ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!