March 31, 2026
Tuesday, March 31, 2026
spot_img

ನಾಳೆ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಬಿಗ್ ಮ್ಯಾಚ್: ದೆಹಲಿ ಟು ಅಹಮದಾಬಾದ್‌ ಓಡಾಡಲಿದೆ ವಿಶೇಷ ರೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ (ಮಾ.8) ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಟಿ20 ವಿಶ್ವಕಪ್ ಫಿನಾಲೆ ಪಂದ್ಯ ನಡೆಯಲಿದ್ದು, ಈ ಹಿನ್ನೆಲೆ ದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು ಸಂಚರಿಸಲಿದೆ.

ಕ್ರಿಡಾಭಿಮಾನಿಗಳಿಗೆ ಪಂದ್ಯ ನೋಡಲು ತೆರಳಲು ಅಸೆ ಇದ್ದರೂ ರೈಲುಗಳ ಲಭ್ಯತೆ ಹಾಗೂ ವಿಮಾನಗಳ ಟಿಕೆಟ್ ದರ ಹೆಚ್ಚಳವಾಗಿದ್ದು, ಹೀಗಾಗಿ ಭಾರತೀಯ ರೈಲ್ವೆಯು ಈ ನಿರ್ಧಾರ ಕೈಗೊಂಡಿದೆ.

ಈ ವಿಶೇಷ ರೈಲು ಇಂದು (ಮಾ.7) ರಾತ್ರಿ 11:45ರ ಸುಮಾರಿಗೆ ದೆಹಲಿಯಿಂದ ಹೊರಟು ನಾಳೆ (ಮಾ.8) ಮಧ್ಯಾಹ್ನ 2:30ರ ಸುಮಾರಿಗೆ ಸಬರಮತಿ ತಲುಪಲಿದೆ. ಈ ರೈಲು ದೆಹಲಿ ಕಂಟೋನ್ಮೆಂಟ್‌, ಗುರುಗ್ರಾಮ್ ಹಾಗೂ ಜೈಪುರ ಮೂಲಕ ಹಾದುಹೋಗಲಿದೆ. 2nd ಎಸಿ, 3rd ಎಸಿ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ಹೊಂದಿದೆ ಎಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !