ಟಿ20 ವಿಶ್ವಕಪ್ : ನೆದರ್ ಲ್ಯಾಂಡ್ ವಿರುದ್ಧ ಟೀಮ್‌ ಇಂಡಿಯಾಗೆ ಜಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಸ್ತುತ ಅಸೀಸ್‌ನಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ನಲ್ಲಿ ನೆದರ್ ಲ್ಯಾಂಡ್ ತಂಡವನ್ನು ಮಣಿಸಿದ ಭಾರತ ಸತತ ಎರಡನೇ ಗೆಲುವನ್ನು ದಾಖಲಿಸಿದೆ.
ನೆದರ್ ಲ್ಯಾಂಡ್ ವಿರುದ್ಧ ಭಾರತ ತಂಡವು 56 ರನ್ ಗಳಿಂದ ದೊಡ್ಡ ಗೆಲುವು ಸಾಧಿಸಿದೆ.
ಭಾರತ ನೀಡಿದ್ದ 180 ರನ್ ಗಳ ಗುರಿಯನ್ನು ಬೆನ್ನಟ್ಟಿದ ನೆದರ್ ಲ್ಯಾಂಡ್ ತಂಡ 20 ಓವರ್ ಗಳಲ್ಲಿ ಕೇವಲ 123 ರನ್ ಗಳಿಸಳಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ
ಬ್ಯಾಟ್ಸ್ ಮನ್ ಟಿಮ್ ಪ್ರಿಂಗಲ್ ತಂಡದ ಪರ ಅತ್ಯಧಿಕ ಸ್ಕೋರರ್ ಆಗಿದ್ದರು. 15ಎಸೆತಗಳನ್ನು ಎದುರಿಸಿದ ಪ್ರಿಂಗಲ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 20 ರನ್ ಗಳಿಸಿದರು. ಭುವನೇಶ್ವರ್ ಕುಮಾರ್, ಅರ್ಷ ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಎರಡು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!