ಟಿ20 ವಿಶ್ವಕಪ್: ಟೀಮ್ ಇಂಡಿಯಾದ ನೂತನ ಜರ್ಸಿ ಅನಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟಿ20 ವಿಶ್ವಕಪ್ ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಭಾರತದ ಪುರುಷರ ಕ್ರಿಕೆಟ್ ತಂಡದ ಹೊಸ ಸ್ಟೈಲಿಶ್ ಜರ್ಸಿಯನ್ನು ಅನಾವರಣಗೊಳಿಸಿದೆ.

ಭಾರತದ ಏಷ್ಯಾ ಕಪ್ 2022 ಜೆರ್ಸಿಗೆ ಹೋಲಿಸಿದರೆ, ಈ ಹೊಸ ಜೆರ್ಸಿ ತಿಳಿ ನೀಲಿ ಬಣ್ಣವನ್ನು ಹೊಂದಿದೆ.ಜರ್ಸಿಯ ಚಿತ್ರ ಹೊರಬಂದ ನಂತ್ರ ಅದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

 

ಟೀಮ್ ಇಂಡಿಯಾದ ಈ ಹೊಸ ಜೆರ್ಸಿಯಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪೋಸ್ ನೀಡುತ್ತಿರುವುದನ್ನ ಕಾಣಬಹುದು.
ಭಾರತದ ಅಧಿಕೃತ ಜರ್ಸಿಯ ಬಿಡುಗಡೆ ಸಮಾರಂಭವು ಮುಂಬೈನಲ್ಲಿ ನಡೆಯಿತು. ಅಲ್ಲದೆ, ಈ ಕಾರ್ಯಕ್ರಮವನ್ನು ಎಂಪಿಎಲ್ ಸ್ಪೋರ್ಟ್ಸ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ನೇರ ಪ್ರಸಾರ ಮಾಡಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!