ತೈವಾನ್-ಚೀನಾ ಬಿಕ್ಕಟ್ಟು: ಶಾಂತಿ ಕಾಪಾಡುವಂತೆ ಭಾರತ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೈವಾನ್-ಚೀನಾ ಬೆಳವಣಿಗೆಗಳ ಬಗ್ಗೆ ಮೊದಲ ಬಾರಿಗೆ ಭಾರತ ಪ್ರತಿಕ್ರಿಯೆ ನೀಡಿದೆ.
ಈ ಕುರಿತು ಆತಂಕ ವ್ಯಕ್ತಪಡಿಸಿರುವ ಭಾರತ, ತೈವಾನ್ ಪ್ರದೇಶದಲ್ಲಿರುವ ಯಥಾಸ್ಥಿತಿಯನ್ನು ಬದಲಾವಣೆ ಮಾಡುವ ಏಕ ಪಕ್ಷೀಯ ಕ್ರಮವನ್ನು ತಪ್ಪಿಸಬೇಕೆಂದು ಕರೆ ನೀಡಿದೆ.

ಸಂಯಮ ಕಾಯ್ದುಕೊಳ್ಳುವಂತೆ ಭಾರತ ಸಲಹೆ ನೀಡಿದ್ದು, ಪ್ರಾದೇಶಿಕವಾಗಿ ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವ ಪ್ರಯತ್ನದ ಅಗತ್ಯತೆಯನ್ನು ಒತ್ತಿ ಹೇಳಿದೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟೀವ್ಸ್ ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ವಿರೋಧಿಸಿ ಚೀನಾ ತೈವಾನ್ ಆಸುಪಾಸಿನ ಪ್ರದೇಶದಲ್ಲಿ ಸೇನಾ ಡ್ರಿಲ್ ನ್ನು ನಡೆಸಿತ್ತು.

ಈ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಾಚಿ, ಇತರ ಎಲ್ಲಾ ರಾಷ್ಟ್ರಗಳಂತೆ ಭಾರತವೂ ಆತಂಕಗೊಂಡಿದೆ. ಸಂಯಮ ಕಾಯ್ದುಕೊಳ್ಳಬೇಕು ಹಾಗೂ ತೈವಾನ್ ಗೆ ಸಂಬಂಧಿಸಿದಂತೆ ಬದಲಾವಣೆ ಮಾಡುವ ಏಕ ಪಕ್ಷೀಯ ಕ್ರಮವನ್ನು ತಪ್ಪಿಸಬೇಕು, ಪ್ರಾದೇಶಿಕವಾಗಿ, ಉದ್ವಿಗ್ನತೆಯನ್ನು ಕಡಿಮೆಗೊಳಿಸಿ, ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!