ಮಾಲಿನ್ಯದಲ್ಲಿ ಮರೆಯಾಗುತ್ತಿರುವ ತಾಜ್‌ ಮಹಲ್ ಸೌಂದರ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವು ವಿಶ್ವವಿಖ್ಯಾತ ಆಗ್ರಾದ ತಾಜ್ ಮಹಲ್ ಸೌಂದರ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಸೂರ್ಯನ ಕಿರಣಗಳು ತಾಗಿ ಮಿನುಗುವ ಬೆಳ್ಳಿಯಂತಿದ್ದ ತಾಜ್ ಮಹಲ್ ಮಾಲಿನ್ಯದ ಕಪ್ಪು ಛಾಯೆಗೆ ಸಿಲುಕಿ ಒದ್ದಾಡುತ್ತಿದೆ. ಮಾಲಿನ್ಯದಿಂದ ರಕ್ಷಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪ್ರಯತ್ನವಾಗಿಯೇ ಉಳಿಯುತ್ತಿದೆ ಹೊರತು ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ.

ದೆಹಲಿಯ ಆಸುಪಾಸಿನಲ್ಲಿರುವ ಮಾಲಿನ್ಯವು ನಗರ ಹಾಗೂ ಅನೇಕ ಐತಿಹಾಸಿಕ ಕಟ್ಟಡಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ದಟ್ಟ ಮಂಜು, ಮಾಲಿನ್ಯವಿದ್ದರೂ ಪ್ರೀತಿಯ ಸಂಕೇತ ಸ್ಮಾರಕಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೇನು ಕಡಿಮೆಯಾಗಿಲ್ಲ. ದಟ್ಟ ಹೊಗೆಯ ನಡುವೆಯೂ ತಾಜ್‌ ಮಹಲ್ ಸೌಂದರ್ಯವನ್ನು ಆನಂದಿಸುತ್ತಿದ್ದು, ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವುದರಲ್ಲಿ ಪ್ರವಾಸಿಗರು ನಿರತರಾಗಿದ್ದಾರೆ.

ಮಾಲಿನ್ಯದ ಮಂಜಿನಲ್ಲೂ ತಾಜ್ ಮಹಲ್‌ನ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!