ಹೊಸದಿಗಂತ ವರದಿ ಹುಬ್ಬಳ್ಳಿ:
ಅಕ್ರಮ ಬಡವಣೆಗಳ ನಿರ್ಮಾಣದಿಂದ ಸರ್ಕಾರದ ಆದಾಯ ಕತ್ತರಿ ಜೊತೆಗೆ ಸಾರ್ವಜನಿಕರಿಗೆ ಮೋಸವಾಗುತ್ತಿದ್ದು, ಇಂತಹ ಕೃತ್ಯ ವೆಸಗುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷ ಶಾಕೀರ ಸನದಿ ಹೇಳಿದರು.
ಸೋಮವಾರ ಇಲ್ಲಿಯ ನವನಗರ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಅನಿಶ್ಚಿತವಾಗಿದೆ. ಜೀವನ ದಲ್ಲಿ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಹು-ಧಾ ಅವಳಿನಗರದಲ್ಲಿ ಅಕ್ರಮ ಬಂಡಾವಣೆಗಳ ನಿರ್ಮಾಣದಿಂದ ಜನರಿಗೆ ಆಗುವ ಅನ್ಯಾಯ ತಡೆಯಲು ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.