ಋತುಚರ್ಯೆ ಪಾಲಿಸಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರೋಗಗಳಿಂದ ದೂರ ಉಳಿಯಬೇಕಾದರೆ ಆರೋಗ್ಯಕರ ದಿನಚರಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಯಷ್ಟೇ ಕಾಲ ಕಾಲಕ್ಕೆ ತಕ್ಕಂತೆ ಆಹಾರ ನಡವಳಿಕೆಗಳನ್ನು ರೂಢಿಸಿಕೊಳ್ಳುವುದು ತುಂಬಾ ಮುಖ್ಯ. ವಾತಾವರಣದ ಪ್ರಭಾವ ದೇಹದ ಮೇಲೆ ನಿರಂತರವಾಗಿ ನಡೆಯುತ್ತಿರುತ್ತದೆ. ಮಳೆಗಾಲದಲ್ಲಿ ಬಿಸಿ ಬಿಸಿ ಕುಡಿಯಬೇಕೆನಿಸುವುದು ಸಹಜ. ಮಳೆಗಾಲದಲ್ಲಿ ವಾತಾವರಣದ ಶೀತಗುಣದಿಂದಾಗಿ ವಾತದೋಷ ಪ್ರಕೋಪಗೊಂಡು ರೋಗಗಳಿಗೆ ಕಾರಣವಾಗುತ್ತದೆ. ಗಾಳಿಯಲ್ಲಿರುವ ನೈಟ್ರೋಜನ್ ಅಂಶಗಳು ಸುರಿಯುವ ಮಳೆನೀರಿನೊಂದಿಗೆ ಸೇರಿ ಹುಳಿಯಾಗುತ್ತದೆ.

ಮಳೆನೀರಿನ ಪ್ರಭಾವದಿಂದ ಭೂಮಿಯಲ್ಲೂ ಹುಳಿಯ ಅಂಶ ಸೇರಿಕೊಂಡು ತರಕಾರಿ ಹಣ್ಣುಗಳ ಮೂಲಕ ನಮ್ಮ ದೇಹದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ದೇಹದಲ್ಲಿ ಪಿತ್ತ ಸಂಗ್ರಹ ಅಧಿಕವಾಗುತ್ತದೆ. ಹಾಗಾಗಿ ಮಳೆಗಾಲದಲ್ಲಿ ಪಿತ್ತವನ್ನು ಹೆಚ್ಚಿಸುವ ಹುಳಿ,ಖಾರ, ಮಸಾಲೆ ಜಾಸ್ತಿ ಇರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಮಳೆಗಾಲದಲ್ಲಿ ಹಸಿವು ಜಾಸ್ತಿಯಾಗುವುದರಿಂದ ಉತ್ತಮ ಪೌಷ್ಠಿಕಾಂಶ ಭರಿತ, ದೇಹಕ್ಕೆ ಬಲಕೊಡುವ ಆಹಾರಗಳು, ಸಿಹಿ ತಿಂಡಿಗಳು, ಹಣ್ಣು, ಗೋಡಂಬಿ ಮೊದಲಾದ ಒಣ ಬೀಜಗಳು ಆಹಾರದಲ್ಲಿರುವಂತೆ ನೋಡುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!