ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಖಿಲ್ ಕುಮಾರಸ್ವಾಮಿ ಅವರನ್ನ ಈಗಲೂ ಶಾಸಕರಾಗಿ ನಾವು ಆಯ್ಕೆ ಮಾಡದಿದ್ದರೆ, ನಾವೆಲ್ಲ ಪಾಪ ಮಾಡಿದಂತೆ ಎಂದು ನಟಿ ತಾರಾ ಅನುರಾಧ ಹೇಳಿದರು.
ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ-ಜೆಡಿಎಸ್ ನಾಯಕರ ಮೈತ್ರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ಜನ ಬಂಗಾರದ ಗೊಂಬೆಯಾಗಿ ಮಾಡಿ ನಿಖಿಲ್ ರನ್ನ ಶಾಸಕರಾಗಿ ಮಾಡ್ತೀರೆಂಬ ನಂಬಿಕೆಯಿದೆ. ಚನ್ನಪಟ್ಟಣದಲ್ಲಿ ಹಿಂದು-ಮುಸ್ಲಿಮರು ಭಾಯಿ ಭಾಯಿಯಂತಿದ್ದಾರೆ, ಎಲ್ಲ ಹಬ್ಬಗಳಲ್ಲಿ ಒಂದಾಗಿರ್ತಾರೆ. ಆದ್ರೆ ವಕ್ಫ್ ವಿಚಾರ ತಂದು ಹಿಂದು-ಮುಸ್ಲಿಮರನ್ನ ಒಡೆಯುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಕಿಡಿ ಕಾರಿದರು.
ನಿಖಿಲ್ ಎರಡು ಅಗ್ನಿಪರೀಕ್ಷೆ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ಗೆಲ್ಲಿಸದಿದ್ರೆ ನಾವು ಪಾಪ ಮಾಡಿದಂತೆ. ನಿಖಿಲ್ ಕೈ ಹಿಡಿದು ಮೇಲೆತ್ತಿ ನನ್ನ ಅಣ್ಣನ ಮಗ ನಿಖಿಲ್ ರನ್ನ ಗೆಲ್ಲಿಸಿ ಅಂತ ತಾರಾ ಮನವಿ ಮಾಡಿದರು.