Tuesday, September 27, 2022

Latest Posts

ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್‌ ನಾಯಕ ರಹೀಮುಲ್ಲಾ ಹಕ್ಕಾನಿ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಫ್ಘಾನಿಸ್ತಾನ ತಾಲಿಬಾನ್‌ನ ಪ್ರಭಾವಿ ನಾಯಕ ರಹೀಮುಲ್ಲಾ ಹಕ್ಕಾಗಿ ಆತ್ಮಹತ್ಯಾ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಗುಪ್ತಚರ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಬೂಲ್‌ನಲ್ಲಿನ ಅವರ ಮದರಸಾದಲ್ಲಿ ಇರುವಾಗಲೇ ಅವರ ಮೇಲೆ ಆತ್ಮಹತ್ಯಾ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 2020 ರಲ್ಲಿ ಪೇಶಾವರದ ಅವರ ಮದರಸಾದಲ್ಲಿ ಅವರ ಮೇಲೆ ನಡೆದ ಆತ್ಮಹತ್ಯಾ ದಾಳಿಯಿಂದ ವೇಳೆ ಅವರು ಪವಾಡಸದೃಶ್ಯವಾಗಿ ಪಾರಾಗಿದ್ದರು. ಆ ದಾಳಿಯ ಹೊಣೆಯನ್ನು ಐಎಸ್‌ಕೆ ವಹಿಸಿಕೊಂಡಿತ್ತು.

ರಹೀಮುಲ್ಲಾ ಹಕ್ಕಾನಿ ಅಫ್ಘಾನಿಸ್ತಾನದ ನಂಗರ್‌ಹಾರ್‌ಗೆ ಸೇರಿದವರಾಗಿದ್ದಾರೆ. ವರದಿಗಳ ಪ್ರಕಾರ, ದಾಳಿಕೋರ ಹಕ್ಕಾನಿ ಸ್ಕೂಲ್‌ ಬಳಿ ಆಗಮಿಸಿ ದಾಳಿ ನಡೆಸಿದ್ದಾನೆ. ಇದರಲ್ಲಿ ರಹೀಮುಲ್ಲಾ ಹಕ್ಕಾನಿಯ ಜೊತೆ ಇತರ ನಾಲ್ವರು ಕೂಡ ಸಾವು ಕಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!