Saturday, April 1, 2023

Latest Posts

ISIS ಉಗ್ರನನ್ನು ಹತ್ಯೆ ಮಾಡಿದ ತಾಲಿಬಾನ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದ (Afghanistan) ರಾಜಧಾನಿಯಲ್ಲಿ ಐಸಿಸ್‌ ಉಗ್ರನನ್ನು (ISIS Terrorist) ತಾಲಿಬಾನ್‌ (Taliban) ಪಡೆ ಹತ್ಯೆ ಮಾಡಿದೆ.

ತಾಲಿಬಾನ್‌ ಪಡೆಗಳು ಕಾರ್ಯಾಚರಣೆ ನಡೆಸಿ ಐಸಿಸ್‌ನ ಗುಪ್ತಚರ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಕ್ವಾರಿ ಫತೇಹ್‌ನನ್ನು ಹತ್ಯೆ ಮಾಡಿದೆ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್‌ ತಿಳಿಸಿದ್ದಾರೆ.

ರಾಜತಾಂತ್ರಿಕರು, ಮಸೀದಿಗಳ ಮೇಲಿನ ದಾಳಿಗೆ ಫತೇಹ್ ಸಂಚು ರೂಪಿಸಿದ್ದನು.

ಈ ಹಿಂದೆ ಕಾಬೂಲ್‌ನ ಅನೇಕ ಕಡೆಗಳಲ್ಲಿ ಐಸಿಸ್‌ ದಾಳಿಗಳನ್ನು ನಡೆಸಿದೆ. ದಾಳಿಯಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಆತ್ಮಾಹುತಿ ದಾಳಿಗಳ ವಿಚಾರವಾಗಿ ಐಸಿಸ್‌ ವಿರುದ್ಧ ತಾಲಿಬಾನ್‌ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!