ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ (Flight) ಕೂತು ಫೋನ್‌ನಲ್ಲಿ ಬಾಂಬ್ (Bomb) ಕುರಿತು ಸಂಭಾಷಣೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ನಡೆದಿದೆ.
ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಜೀಂ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಸ್ತಾರ ವಿಮಾನ (Vistara Airlines) ಸಂಖ್ಯೆ ಯುಕೆ-981ರಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಆತ ತನ್ನ ಫೋನ್‌ನಲ್ಲಿ ಬಾಂಬ್ ಕುರಿತು ಮಾತನಾಡುತ್ತಿದ್ದ. ಇದನ್ನು ಸಹ ಪ್ರಯಾಣಿಕರೊಬ್ಬರು ಕೇಳಿಸಿಕೊಂಡಿದ್ದಾರೆ.
ಆರೋಪಿ ಬಾಂಬ್ ಕುರಿತು ವಿಮಾನದಲ್ಲಿ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ತಕ್ಷಣ ವಿಮಾನದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸಿಬ್ಬಂದಿ ಆರೋಪಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (CIF) ಹಸ್ತಾಂತರಿಸಿದ್ದಾರೆ.
ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಫೋನ್‌ನಲ್ಲಿ ಆತ ಬಾಂಬ್ ಕುರಿತು ಸಂಭಾಷಣೆ ಮಾಡುತ್ತಿದ್ದುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.