Tuesday, August 9, 2022

Latest Posts

ಖ್ಯಾತ ನಟ ಚಿಯಾನ್‌ ವಿಕ್ರಮ್‌ ಗೆ ಹೃದಯಾಘಾತ; ಚೆನ್ನೈ ಆಸ್ಪತ್ರೆಗೆ ಶಿಫ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಹುಮುಖ ನಟ ‘ಚಿಯಾನ್’ ವಿಕ್ರಮ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಚೆನ್ನೈನಿಂದ ಹೊರಬರುತ್ತಿರುವ ಮಾಧ್ಯಮ ವರದಿಗಳ ಪ್ರಕಾರ, ನಟನನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ. ವರದಿಗಳ ಪ್ರಕಾರ, ವಿಕ್ರಮ್ ಅವರ ಸ್ಥಿತಿ ಸ್ಥಿರವಾಗಿದೆ.
ಇಂದು ಸಂಜೆ 6 ಗಂಟೆಗೆ ಚೆನ್ನೈನಲ್ಲಿ ನಡೆಯಲಿರುವ ‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವಿಕ್ರಮ್ ಭಾಗವಹಿಸಬೇಕಿತ್ತು. ಹಠಾತ್ ಅನಾರೋಗ್ಯದ ಕಾರಣ ವಿಕ್ರಮ್‌ಗೆ 56 ವರ್ಷದ ವಿಕ್ರಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬೀಳಬೇಕಿದೆ.
ಸುದ್ದಿ ತಿಳಿದ ವಿಕ್ರಮ್ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಶಾಕ್ ಆಗಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ವಿಕ್ರಮ್ ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ನಟನಾ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಶಿವ ಪುತ್ರುಡು (ತಮಿಳಿನಲ್ಲಿ ಪಿತಾಮಗನ್), ಅಪರಿಚಿತುಡು ಸೇರಿದಂತೆ ಹಲವಾರು ಸೂಪರ್‌ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿಕ್ರಮ್ ಅವರ ಪುತ್ರ ಧ್ರುವ 2019 ರಲ್ಲಿ ‘ಆದಿತ್ಯ ವರ್ಮ’ (ಅರ್ಜುನ್ ರೆಡ್ಡಿ ರಿಮೇಕ್) ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ‘ಮಹಾನ್’ ಚಿತ್ರದಲ್ಲಿ ಧ್ರುವ ಮತ್ತು ವಿಕ್ರಮ್ ಒಟ್ಟಿಗೆ ನಟಿಸಿದ್ದಾರೆ. ವಿಕ್ರಮ್ ಅವರ ಮುಂಬರುವ ಚಿತ್ರ ಕೋಬ್ರಾ ಆಗಸ್ಟ್ 11 ರಂದು ತೆರೆಗೆ ಬರಲಿದೆ. ಈ ನಡುವೆ ಅವರು ಅನಾರೋಗ್ಯಕ್ಕೀಡಾಗಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss