ತಮಿಳು ನಟ, ನಿರ್ದೇಶಕ ಮನೋಜ್ ಭಾರತಿರಾಜ ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಪ್ರಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಭಾರತಿರಾಜ ಹೃದಯಾಘಾತದಿಂದ ಮಂಗಳವಾರ ನಿಧನರಾದರು.

1999 ರಲ್ಲಿ ಭಾರತಿರಾಜ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ತಮ್ಮ 48ನೇ ವಯಸ್ಸಿನಲ್ಲಿ ಅವರು ಸಾವನಪ್ಪಿದ್ದಾರೆ .

ಮನೋಜ್ ಅವರು ಸಮುದ್ರಂ, ಕಡಲ್ ಪೂಕ್ಕಲ್, ಅಲ್ಲಿ ಅರ್ಜುನ, ವರುಷಂ ತುಳ್ಳವ ವಸಂತಂ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಆದರೆ ಅವರು ಹೀರೋ ಆಗಿ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಲಿಲ್ಲ. ಅವರು ಈಶ್ವರನ್, ಮಾನಾಡು, ವಿರುಮಾನ್ ಮತ್ತು ಚಂಪಿಯನ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು 2023 ರಲ್ಲಿ ಬಿಡುಗಡೆಯಾದ ಮಾರ್ಗಜಿ ತಿಂಗಲ್ ಚಿತ್ರದ ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು.

2006 ರಲ್ಲಿ ನಟಿ ನಂದನಾ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಅವರು ತಮ್ಮ ಚೆಟ್‌ಪಟ್ ಮನೆಯಲ್ಲಿ ನಿಧನರಾದರು ಎಂದು ಹೇಳಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!