ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಪ್ರದೀಪ್ ಕೆ. ವಿಜಯನ್ ಅವರು ಬುಧವಾರ (ಜೂನ್ 12) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಚೆನ್ನೈನ ತಮ್ಮ ನಿವಾಸದ ಸ್ನಾನಗೃಹದಲ್ಲಿ ಪ್ರದೀಪ್ ತಲೆಗೆ ಪೆಟ್ಟಾಗಿದ್ದು, ಶವವಾಗಿ ಪತ್ತೆಯಾಗಿದ್ದಾರೆ.ಸದ್ಯ ನಟನ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಪ್ರದೀಪ್ ವಿಜಯನ್ ಮೊಬೈಲ್ ಮೂಲಕ ಸ್ನೇಹಿತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನ ವಿಫಲವಾಗಿದೆ. ಸ್ನೇಹಿತ ಮೊಬೈಲ್ ಅನ್ನು ನೋಡಿದಾಗ ಕರೆ ಮಾಡಿರುವುದು ಅರಿವಿಗೆ ಬಂದಿದ್ದು, ನಟನ ಮನೆಗೆ ದಾವಿಸಿ ಬಂದಿದ್ದಾನೆ. ಆದರೆ ಆತ ಹಲವಾರು ಬಾರಿ ಬಡಿದರೂ ಬಾಗಿಲು ತೆರೆದಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.ಪೊಲೀಸರು ಬಾಗಿಲು ಒಡೆದು ನೋಡಿದಾಗ ನಟ ಮೃತಪಟ್ಟಿರುವುದು ಕಂಡುಬಂದಿದೆ.
ಪ್ರದೀಪ್ ಇತ್ತೀಚೆಗೆ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.