Wednesday, July 6, 2022

Latest Posts

ತಮಿಳು ನಟ ಶಿಂಬು ಕಾರು ಅಪಘಾತ: ವಿಕಲಚೇತನ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ತಮಿಳು ನಟ ಶಿಂಬು ಅವರ ಕಾರು ಅಪಘಾತದಲ್ಲಿ ವೃದ್ಧ ವಿಕಲಚೇತನ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ಬುಧವಾರ ನಡೆದ ಈ ಅಪಘಾತದಲ್ಲಿ ವಿಶೇಷ ಚೇತನ ವೃದ್ಧ ಮುನುಸ್ವಾಮಿ (70) ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಂಬು ಅವರ ಕಾರು ಚಾಲಕ ಸೆಲ್ವಂ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಅಪಘಾತದ ವೇಳೆ ಕಾರಿನಲ್ಲಿ ಶಿಂಬು ಅಥವಾ ಅವರ ಕುಟುಂಬದವರು ಇರುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಚೆನ್ನೈನಲ್ಲಿ ಈ ದುರ್ಘಟನೆ ನಡೆದಿದೆ. ಅಫಘಾತದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಪಾದಚಾರಿ ಮಾರ್ಗದಲ್ಲಿ ಮುನುಸ್ವಾಮಿ ರಸ್ತೆ ದಾಟುತ್ತಿದ್ದ ವೇಳೆ ತಿರುವು ಪಡೆಯುತ್ತಿದ್ದ ಶಿಂಬು ಅವರ ಕಾರು ಡಿಕ್ಕಿ ಹೊಡೆದಿದೆ.
ಕಾರಿನ ಚಕ್ರದ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮುನುಸ್ವಾಮಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಸ್ಥಳೀಯ ಪೊಲೀಸರು ನಟ ಸಿಂಬು ಅವರಿಗೆ ಸೇರಿದ ಕಾರು ಚಾಲಕನನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss