ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ದೇವಸ್ಥಾನಕ್ಕೆ ತಮಿಳುನಾಡು ಸರ್ಕಾರ ಬೀಗ ಜಡಿದಿದೆ. ಈ ದೇವಾಲಯಕ್ಕೆ ದಲಿತರು ಪ್ರವೇಶಿಸಬಾರದು ಎಂದು ಪ್ರಬಲ ಜಾತಿಯವರು ಆಜ್ಞೆ ಮಾಡಿದ್ದರು. ಈ ಕುರಿತು ಶಾಂತಿ ಮಾತುಕತೆಗಳು ನಡೆದಿದ್ದವು. ಆದರೂ, ದಲಿತರಿಗೆ ಪ್ರವೇಶವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ತಮಿಳು ನಾಡು ಸರ್ಕಾರ ದೇವಸ್ಥಾನಕ್ಕೆ ಬೀಗ ಜಡಿದಿದೆ.
ಏನಿದು ಘಟನೆ?
ಈ ವರ್ಷದ ಏಪ್ರಿಲ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ದೇವಾಲಯಕ್ಕೆ ಪ್ರವೇಶಿಸಿದ್ದರು. ಅಂದಿನಿಂದ ಇಂದಿನವರೆಗೆ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು. ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಜಾತಿಯತೆ ಬಗ್ಗೆ ತಿಳುವಳಿಕೆ ಮೂಡಿಸಲು ಅಧಿಕಾರಿಗಳು ಯತ್ನಿಸಿದ್ದರು. ಆದರೆ ಈ ವಿವಾದ ಮುಗಿಯದ ಕಾರಣ ವಿಲುಪುರಂ ಜಿಲ್ಲಾ ಕಂದಾಯ ಆಯುಕ್ತ ರವಿಚಂದ್ರನ್ ದೇವಸ್ಥಾನವನ್ನು ಸೀಲ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಗ್ರಾಮದಲ್ಲಿ ಎರಡು ಸಮುದಾಯದ ನಡುವಿನ ಸಮಸ್ಯೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇದು ಕಾನೂನು ಮತ್ತು ಸುವ್ಯವಸ್ಥೆ ತೊಡಕನ್ನು ಉಂಟುಮಾಡುವ ಸಮಸ್ಯೆಗಳಿಗೆ ಅವಕಾಶ ನೀಡುತ್ತದೆ. ಎರಡು ಕಡೆಯವರು ಇದನ್ನು ಬಗೆಹರಿಸಿಕೊಳ್ಳುವವರೆಗೆ ದೇವಸ್ಥಾನದ ಒಳಗೆ ಯಾರಿಗೂ ಪ್ರವೇಶವಿಲ್ಲ ಎಂದು ದೇವಾಲಯದ ದ್ವಾರಗಳ ಮೇಲೆ ಅಂಟಿಸಲಾದ ಅಧಿಕೃತ ಸೂಚನೆಯಲ್ಲಿ ಬರೆಯಲಾಗಿದೆ.