ಒಡಿಶಾ ಮಾರಣಾಂತಿಕ ಅಪಘಾತದ ಹಿಂದಿನ ಕೊನೆಯ ಕ್ಷಣಗಳು: ಲೈವ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ನಂತರ, ಬದುಕುಳಿದವರು ಹಂಚಿಕೊಂಡ ಅನೇಕ ಕಥೆಗಳು ದೇಶಾದ್ಯಂತ ಜನರ ಮನಸ್ಸನ್ನು ಕದಲಿಸಿದೆ. ಮೃತ ಪುತ್ರರ ಗುರುತಿಗಾಗಿ ಕಾಯುತ್ತಿದ್ದ ಅಪ್ಪಂದಿರು ಹಾಗೂ ಆತ್ಮೀಯರ ಶವಕ್ಕಾಗಿ ಹುಡುಕಾಟ ನಡೆಸುತ್ತಿರುವ ಸಂಬಂಧಿಕರು ಕಣ್ಣೀರು ಎಂಥವರನ್ನೂ ಮೂಕರನ್ನಾಗಿಸಿದ. ಡಿಕ್ಕಿಯಾಗುವ ಮುನ್ನ ರೈಲಿನ ಅಂತಿಮ ಕ್ಷಣಗಳ ವಿಡಿಯೋ ಇದೀಗ ಹೊರಬಿದ್ದಿದೆ. ಈ ವಿಡಿಯೋವನ್ನು ಕೋಚ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ್ದಾರೆ ಎನ್ನಲಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ರೈಲು ಅಪಘಾತದ ಮೊದಲು ರೈಲ್ವೇ ಸಿಬ್ಬಂದಿ ಕೋಚ್ ನೆಲವನ್ನು ಸ್ವಚ್ಛಗೊಳಿಸುತ್ತಿರುವಾಗ ಮಹಿಳೆ ಮಲಗಿದ್ದನ್ನು ವಿಡಿಯೋ ತೋರಿಸುತ್ತಿದೆ. ಅಪಘಾತದ ಬಳಿಕ ಶಬ್ಧ, ಜೋರಾದ ಕಿರುಚಾಟ, ಅಳುವ ಧ್ವನಿ ಕೇಳಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!