Wednesday, August 17, 2022

Latest Posts

ತಮಿಳುನಾಡು ಜೂನಿಯರ್ ಕ್ರಿಕೆಟ್ ತಂಡಕ್ಕೆ ಪ್ರವೀಣ್ ತ್ಯಾಗರಾಜನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಜೂನಿಯರ್ ಕ್ರಿಕೆಟ್ ತಂಡದ(19 ವರ್ಷದೊಳಗಿನವರು) ನಾಯಕನಾಗಿ ನೀಲಗಿರಿ ಜಿಲ್ಲೆಯ ಪ್ರವೀಣ್ ತ್ಯಾಗರಾಜನ್ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರವೀಣ್, ‘ಶಾಲೆಯಲ್ಲಿ ಓದುವಾಗ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ ಇತ್ತು. ನನ್ನ ಸಹ ಆಟಗಾರರ ಪ್ರೋತ್ಸಾಹದಿಂದಾಗಿ ಈಗ ನಾಯಕನಾಗಿ ಆಯ್ಕೆಯಾಗಿದ್ದೇನೆ. ಹಲವು ವೈಫಲ್ಯಗಳ ನಂತರ ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಚೆನ್ನೈ, ಹೈದರಾಬಾದ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಆಡಿರುವ ಇವರಿಗೆ ರಾಷ್ಟ್ರಮಟ್ಟದಲ್ಲಿ ಸಾಧನೆ ಕನಸಿದೆ. ಚಿಕ್ಕ ವಯಸ್ಸಿನಲ್ಲಿ ಸಿಕ್ಕ ಈ ಜವಾಬ್ದಾರಿಗೆ ಸಂತಸಗೊಂಡಿರುವ ಪ್ರವೀಣ್​ ‘ನಾನೊಬ್ಬ ಆಲ್ ರೌಂಡರ್ ಎಲ್ಲರನ್ನೂ ಒಗ್ಗೂಡಿಸಿ ತಂಡದ ಯಶಸ್ಸಿಗೆ ಶ್ರಮಿಸುತ್ತೇನೆ’ ಎಂದಿದ್ದಾರೆ.
ಪ್ರವೀಣ್ ಪ್ರಸ್ತುತ ಕಾರುಣ್ಯ ಸಂಸ್ಥೆಯಲ್ಲಿ ಬಿ.ಕಾಂ ಮೂರನೇ ವರ್ಷದಲ್ಲಿ ಓದುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!