ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಂಚೌಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ಅಕ್ಷರಶಃ ತತ್ತರಿಸಿದೆ.
ದಿನೇ ದಿನೇ ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿದ್ದು, ಇಂದು ಹಾಗೂ ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಂಧ್ರಪ್ರದೇಶದ ಬಾಪಟ್ಲಾ ಸಮೀಪ ನೆಲ್ಲೂರು ಮತ್ತು ಮಚಿಲಿಪಟ್ಟಣಂ ನಡುವೆ ತೀವ್ರ ಚಂಡಮಾರುತದಿಂದಾಗಿ ಭೂಕುಸಿತ ಆಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಭಾನುವಾರ ಬೆಳಗ್ಗೆಯಿಂದ ಆರಂಭವಾದ ಮಳೆ ಬಿಡುವು ನೀಡದೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತಿದೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈನ ಬಹುತೇಕ ರಸ್ತೆಗಳು, ವಸತಿ ಪ್ರದೇಶಗಳು, ರೈಲು ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಬಸ್‌ನಿಲ್ದಾಣಗಳು ನದಿಗಳಂತೆ ಕಾಣುತ್ತಿವೆ. ಚೆನ್ನೈನ ಎಲ್ಲಾ ಸುರಂಗ ಮಾರ್ಗಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಮಿಂಚೌಂಗ್ ಚಂಡಮಾರುತದಿಂದಾಗಿ ಈವರೆಗೂ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
“Saar, lake view home. Only 60L for 2bhk”
6 months later pic.twitter.com/YB2nIT7pra
— Gabbar (@GabbbarSingh) December 4, 2023
ಇಂದು ಮಧ್ಯಾಹ್ನದಿಂದ ಮಳೆ ಆರಂಭವಾಗಲಿದ್ದು, ಚಳಿಗಾಳಿಯೂ ಅತಿಯಾಗ ಬೀಸಲಿದೆ ಎಂದು ಅಂದಾಜಿಸಲಾಗಿದೆ.
#WATCH | Tamil Nadu | Koovam river rages as water from nearby lakes released into it due to heavy rainfall in the city in the wake of Severe Cyclonic Storm Michaung.
Michaung is likely to make landfall today on the southern coast of Andhra Pradesh between Nellore and… pic.twitter.com/NyYMpKOLMg
— ANI (@ANI) December 5, 2023