ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಸಿನಿಮಾ ವೀಕ್ಷಣೆಗಾಗಿ ಸಾಮಾನ್ಯ ಜನರಷ್ಟೇ ಅಲ್ಲದೆ, ರಾಜಕೀಯ ನಾಯಕರು ಧಾವಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ತಮನ್ನಾ, ಕನ್ನಡದ ಸ್ಟಾರ್ ಹೀರೋ ಶಿವ ರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ನಟರಾದ ಮೋಹನ್ ಲಾಲ್, ಜಾಕಿ ಶ್ರಾಫ್, ಸುನೀಲ್ ಸೇರಿದಂತೆ ಅದ್ದೂರಿ ತಾರಾಬಳಗವಿದೆ. ಜೈಲರ್ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದು, ಮೂರು ದಿನಗಳಲ್ಲೇ 220 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ರಜನಿಕಾಂತ್ ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಅದರ ಜೊತೆಗೆ ಹೀರೋಗಳು, ರಾಜಕಾರಣಿಗಳು, ಅನೇಕ ಸೆಲೆಬ್ರಿಟಿಗಳು…ಎಲ್ಲರೂ ತಲೈವಾ ಅಭಿಮಾನಿಗಳೇ ಆಗಿದ್ದಾರೆ. ಜೈಲರ್ ಹಿಟ್ ಆದ ಮೇಲೆ ಎಲ್ಲರೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವಾಸೆ ಬಂದಿದೆ.
ಈ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ರಜನಿಕಾಂತ್ ಅಭಿಮಾನಿಯಾಗಿರುವುದರಿಂದ ಕುಟುಂಬ ಸಮೇತ ಥಿಯೇಟರ್ ಗೆ ತೆರಳಿ ಜೈಲರ್ ವೀಕ್ಷಿಸಿದ್ದರು. ಸಿನಿಮಾ ಇಷ್ಟವಾದ ಕಾರಣ ನಿರ್ದೇಶಕರು ನೆಲ್ಸನ್ ಅವರನ್ನು ವಿಶೇಷವಾಗಿ ಕರೆದು ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ಕುಟುಂಬ ಸಮೇತ ಥಿಯೇಟರ್ ಗೆ ತೆರಳಿ ಜೈಲರ್ ಸಿನಿಮಾ ವೀಕ್ಷಿಸಿದ್ದರು. ಈ ವಿಡಿಯೋಗಳು ವೈರಲ್ ಆಗಿವೆ. ಸಿಎಂಗಳ ಜೊತೆಗೆ ಎಲ್ಲ ವರ್ಗದ ಸೆಲೆಬ್ರಿಟಿಗಳು ಕೂಡ ತಮ್ಮ ಕುಟುಂಬ ಸಮೇತ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗೆ ತೆರಳುತ್ತಿದ್ದು, ಅವರ ರೇಂಜ್ ಏನೆಂಬುದು ಮತ್ತೊಮ್ಮೆ ಎಲ್ಲರಿಗೂ ಮತ್ತೊಮ್ಮೆ ಗೊತ್ತಾಗಿದೆ.