ತಮಿಳುನಾಡು ಹೂಚ್ ಪ್ರಕರಣ: ಸಂತ್ರಸ್ತರ ಮಕ್ಕಳಿಗೆ ಸಿಎಂ ಸ್ಟಾಲಿನ್ ಪರಿಹಾರ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲ್ಲಕುರುಚಿ ಹೂಚ್ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚವನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಜೂನ್ 19 ರಂದು ಕಲ್ಲಕುರಿಚಿಯಲ್ಲಿ ನಡೆದ ಘಟನೆಯಲ್ಲಿ ಮೆಥನಾಲ್ ಮಿಶ್ರಿತ ವಿಷಪೂರಿತ ಅಕ್ರಮ ಮದ್ಯ ಸೇವಿಸಿ 47 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಇದೊಂದು ನೋವಿನ ಘಟನೆ ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. “117 ಜನರನ್ನು ದಾಖಲಿಸಲಾಗಿದೆ 47 ಜನರು ಸಾವನ್ನಪ್ಪಿದ್ದಾರೆ. 66 ಜನರನ್ನು ಕಲ್ಲಕುರಿಚಿ ಆಸ್ಪತ್ರೆಗೆ, 32 ಜನರನ್ನು ಸೇಲಂ ಆಸ್ಪತ್ರೆಗೆ, ಇಬ್ಬರು ವ್ಯಕ್ತಿಗಳನ್ನು ವಿಲ್ಲುಪುರಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು 16 ಮಂದಿ ಪಾಂಡಿಚೇರಿ ಜಿಪ್ಮರ್‌ನಲ್ಲಿದ್ದಾರೆ” ಎಂದು ಸ್ಟಾಲಿನ್ ಹೇಳಿದರು.

ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ 18 ವರ್ಷದವರೆಗೆ ಮಾಸಿಕ 5000 ರೂ.ಗಳನ್ನು ಸರ್ಕಾರ ನೀಡಲಿದೆ ಮತ್ತು ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 5 ಲಕ್ಷ ರೂಪಾಯಿಗಳನ್ನು ತಕ್ಷಣವೇ ಸ್ಥಿರ ಠೇವಣಿ ಮಾಡಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.

ಅಪ್ರಾಪ್ತರಿಗೆ 18 ವರ್ಷ ತುಂಬಿದ ನಂತರ ಬಡ್ಡಿ ಸಮೇತ ಹಣವನ್ನು ಹಿಂಪಡೆಯಬಹುದು ಎಂದು ಹೇಳಿದರು. ಅದೇ ರೀತಿ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ.ಗಳನ್ನು ನಿಶ್ಚಿತ ಠೇವಣಿ ಇಡಲಾಗುವುದು. ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳಲ್ಲಿ ಅವರಿಗೆ ಆದ್ಯತೆ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!