Sunday, October 2, 2022

Latest Posts

ತಾಪ್ಸಿ ‘ದೊಬಾರಾ’ ಪೈರಸಿಗೆ ಬಲಿ: ಆನ್‌ಲೈನ್‌ನಲ್ಲಿ ಸಂಪೂರ್ಣ ಚಿತ್ರ ಲೀಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ನಿರ್ಮಾಪಕ ಅನುರಾಗ್ ಕಶ್ಯಪ್ ನಿರ್ದೇಶನದ, ತಾಪ್ಸೀ ಪನ್ನು ಮತ್ತು ಪಾವೈಲ್ ಗುಲಾಟಿ ನಟನೆಯ ‘ದೋಬಾರಾ’ ಬಿಡುಗಡೆಯಾದ ಒಂದೇ ದಿನದಲ್ಲಿ ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಸೋರಿಕೆಯಾಗಿದೆ.
ಮಿಸ್ಟರಿ-ಥ್ರಿಲ್ಲರ್ ಆಗಿರುವ ಈ ಚಿತ್ರ ನಿನ್ನೆ( ಆ.19) ಬಿಡಿಗಡೆ ಕಂಡು ವೀಕ್ಷಕರಿಂದ ನಿರಾಶಾದಾಯಕ ಪ್ರತಿಕ್ರಿಯೆ ಪಡೆದಿತ್ತು. ಚಿತ್ರತಂಡ ಈ ಬೇಸರದಲ್ಲಿ ಇರುವಾಗಲೇ ತಮಿಳುರಾಕರ್ಸ್, ಮೂವಿರುಲೆಜ್ ಮತ್ತು ಟೆಲಿಗ್ರಾಮ್‌ನಂತಹ ವೆಬ್‌ಸೈಟ್‌ಗಳಿಂದ ಇಡೀ ಚಲನಚಿತ್ರವನ್ನು ಸೋರಿಕೆ ಮಾಡಲಾಗಿದೆ. ಥಿಯೆಟರ್‌ ಗಳಲ್ಲಿ ಬಣಗುಟ್ಟುತ್ತಿರುವ ಚಿತ್ರವನ್ನು ಆನ್‌ ಲೈನ್‌ನಲ್ಲಿ ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ.
ಚಿತ್ರ ಲೀಕ್‌ ಆಗಿರುವುದು ನಿರ್ಮಾಪಕರಿಗೆ ಆಘಾತ ತಂದಿದೆ. ವರದಿಗಳ ಪ್ರಕಾರ, ಚಿತ್ರವು ತನ್ನ ಮೊದಲ ದಿನದಂದು ಅತ್ಯಂತ ಕಳಪೆ ಆರಂಭವನ್ನು ಪಡೆದಿದೆ. ಚಿತ್ರಮಂದಿರಗಳಲ್ಲಿ ಕೇವಲ 2-3 ಪ್ರತಿಶತದಷ್ಟು ಮಾತ್ರವೇ ಪ್ರೇಕ್ಷರಿದ್ದರು ಎಂದು ವರದಿಯಾಗಿದೆ. 50 ಕೋಟಿ ಬಜೆಟ್‌ನಲ್ಲಿ ತಯಾರಾದ ‘ದೋಬಾರ’ ಮೊದಲ ದಿನ 72 ಲಕ್ಷ ರೂ. ಮಾತ್ರವೇ ಗಳಿಸಿದೆ. ಆನ್‌ಲೈನ್‌ನಲ್ಲಿ ಚಿತ್ರ ಲೀಕ್ ಆಗಿರುವುದರಿಂದ ವ್ಯಾಪಾರ ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ.
ಈ ಒಂದು ವರ್ಷದಲ್ಲಿ ವಿಕ್ರಾಂತ್ ರೋಣಾ, ಜಗ್ ಜಗ್ ಜೀಯೋ, ಶೀ- 2′, ಭೂಲ್ ಭುಲೈಯಾ 2, ಸರ್ಕಾರಿ ವಾರಿ ಪಾಟ, ಕೆಜಿಎಫ್ 2, ಆರ್‌ಆರ್‌ಆರ್, ಆಚಾರ್ಯ, ಸ್ಟ್ರೇಂಜರ್ ಥಿಂಗ್ಸ್ ಸೀಸನ್ 4 , ಅಟ್ಯಾಕ್, ’83’ ಸೇರಿದಂತೆ ಹಲವಾರು ಚಿತ್ರಗಳು ಪೈರಸಿಗೆ ಒಳಗಾಗಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!