ಕಾಂಗ್ರೆಸ್‌ನಲ್ಲಿ ನನ್ನನ್ನು, ನನ್ನ ಬೆಂಬಲಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಶಾಸಕ ತನ್ವೀರ್ ಸೇಠ್

ಹೊಸದಿಗಂತ ವರದಿ, ಮೈಸೂರು:

ಪಕ್ಷದಲ್ಲಿ ನನ್ನನ್ನು ಹಾಗೂ ನನ್ನ ಬೆಂಬಲಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತಿದೆ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕಿಡಿಕಾರಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆಪ್ತ ಶಾಹಿದ್‌ನನ್ನು ಕಾಂಗ್ರೆಸ್‌ನಿJದ ಉಚ್ಚಾಟನೆ ಮಾಡಿರುವುದಕ್ಕೆ ಇದೇ ವೇಳೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಯಾವ ಶಕ್ತಿಯೂ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಫಲ ಕೊಡುವ ಮರಕ್ಕೇ ತಾನೆ ಜಾಸ್ತಿ ಕಲ್ಲೇಟು. ನನ್ನನ್ನ,ನನ್ನ ಬೆಂಬಲಿಗರನ್ನ ಟಾರ್ಗೆಟ್ ಮಾಡ್ತಿರೋದು ನಿಜ. ಮೈಸೂರು ನಗರಪಾಲಿಕೆ ಮೇಯರ್ ಚುನಾವಣೆ ಬಳಿಕ ಈ ರೀತಿ ನಿರಂತರವಾಗಿ ನಡೆಯುತ್ತಿದೆ. ಯಾವ ಕಾರಣಕ್ಕೆ ಉಚ್ಚಾಟನೆ ಮಾಡಿದ್ದಾರೆ ಅಂತ ನನಗೆ ನಿಖರ ಮಾಹಿತಿ ಇಲ್ಲ. ಆದರೆ ಪಕ್ಷದಲ್ಲಿ ದುಡಿದ ನಿಷ್ಟಾವಂತರನ್ನ ಈ ರೀತಿ ಉಚ್ಚಾಟನೆ ಮಾಡಿದರೆ ಪಕ್ಷ ಸಂಘಟನೆ ಕಷ್ಟವಾಗುತ್ತೆ. ಇಬ್ರಾಹಿಂ ಸ್ವಾಗತಿಸಿದ್ದಕ್ಕೆ ಉಚ್ಚಾಟನೆ ಮಾಡಿದ್ದೀರಾ ಅಥವಾ ಬೇರೆ ಕಾರಣಕ್ಕೆ ಉಚ್ಚಾಟಿಸಿದ್ರಾ ಅಂತ ಪಕ್ಷದ ಅಧ್ಯಕ್ಷರನ್ನ ಕೇಳ್ತೀನಿ. ಈ ಸಂಬoಧ ನಾನು ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಶಾಲಾ-ಕಾಲೇಜ್‌ಗಳಲ್ಲಿ ವಸ್ತç ಸಂಹಿತೆಯನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.
¸ ಶಾಲೆ-ಕಾಲೇಜ್‌ಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವ ವಿವಾದ ಕಾವೇರುತ್ತಿದ್ದಂತೆ ಸರ್ಕಾರ ಏಕಾಏಕಿಯಾಗಿ ವಸ್ತ್ರ ಸಂಹಿತೆ ಜಾರಿಯ ಆದೇಶ ಹೊರಡಿಸಿದೆ. ಇದು ಏಕಪಕ್ಷಿಯವಾದ ನಿರ್ಧಾರ. ಇದು ಸರಿಯಲ್ಲ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ಹಿಜಾಬ್ ವಿಚಾರ ನ್ಯಾಯಾಲಯದ ಮುಂದೆ ಇದೆ. ನ್ಯಾಯಾಲಯದ ಬೆಳವಣಿಗೆ ಕಾದು ನೋಡಬೇಕಿದೆ. ಮದ್ರಾಸ್ ಹೈ ಕೋರ್ಟ್ ಮಹಾರಾಷ್ಟçದಲ್ಲಿ ಅವಕಾಶ ನೀಡಲಾಗಿದೆ. ಅದರ ಆದೇಶದ ಪ್ರತಿ ನಮ್ಮ ಬಳಿ ಇದೆ. ಇದೆಲ್ಲವನ್ನು ರಾಜಕೀಯ ದುರುದ್ದೇಶ ಹಾಗೂ ಓಟ್ ಬ್ಯಾಂಕ್ ಗಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಸಹ ಮತಾಂತರ ಆಗಲಿ 
ತನ್ವೀರ್ ಸೇಠ್ ಪೂರ್ವಜರು ಮತಾಂತರ ಆಗಿದ್ದರು ಎಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಸಿಯಿಸಿದ ಶಾಸಕ ತನ್ವೀರ್ ಸೇಠ್, ಪ್ರತಾಪಸಿಂಹ ಸಹ ಮತಾಂತರ ಆಗಲಿ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು. ಪ್ರತಾಪಸಿಂಹ ಯಾವ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡಿರಬಹುದು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬೇಕಾದರೆ ಅವರೇ ಮತಾಂತರ ಆಗಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!