ವನ್ಯ ಜೀವಿಗಳ ಮೇಲೆ ನಿಗಾ ಇಡಲು ಬರಲಿದೆ ಟಾಸ್ಕ್ ಫೋರ್ಸ್: ಕೇರಳ ಸರ್ಕಾರ ಹೊಸ ಚಿಂತನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವಸತಿ ಪ್ರದೇಶಗಳತ್ತ ನುಗ್ಗಿ ತೊಂದರೆ ಉಂಟು ಮಾಡುವ ವನ್ಯ ಜೀವಿಗಳ ಚಲನವಲನಗಳ ಮೇಲೆ ನಿಗಾ ಇಡಲು ಕೇರಳ ಸರ್ಕಾರ ಅಂತರರಾಜ್ಯ ಟಾಸ್ಕ್ ಫೋರ್ಸ್ ರಚಿಸಲು ನಿರ್ಧರಿಸಿದೆ.
ಈ ಬಗ್ಗೆ ಅರಣ್ಯ ಸಚಿವ ಕೆ. ಶಶಿಧರನ್ ಮಾಹಿತಿ ನೀಡಿದ್ದಾರೆ.

ಈ ನಡುವೆ ವಯನಾಡು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಕೇರಳ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕೇರಳ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳಿಧರನ್ ಆರೋಪಿಸಿದ್ದು, ವಯನಾಡು ಜಿಲ್ಲೆಯಲ್ಲಿ ವನ್ಯ ಜೀವಿಗಳ ಉಪಟಳ ಹೆಚ್ಚಾಗಿ ಕಾಣಿಸಿಕೊಂಡಿದೆ.

ಇವುಗಳ ಮೇಲೆ ನಿಗಾ ಇಡಲು ಕೇರಳ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಸಮನ್ವಯ ಇಲ್ಲ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಆನೆಗಳ ಚಲನವಲನಗಳ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಯವರು ನಮ್ಮ ಜೊತೆ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ ಎಂದು ಆರೋಪಿಸಿದ ಸಚಿವರು ಇದನ್ನು ತಡೆಯುವ ನಿಟ್ಟಿನಲ್ಲಿ ಹೊಸ ಅಂತರರಾಜ್ಯ ಟಾಸ್ಕ್ ಫೋರ್ಸ್ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಶನಿವಾರವಷ್ಟೇ ವಯನಾಡು ಜಿಲ್ಲೆಯ ಪಾಯಂಪಳ್ಳಿ ಬಳಿಯ ಮಾನಂತವಾಡಿ ಎಂಬಲ್ಲಿ ಆನೆ ದಾಳಿಗೆ 42 ವರ್ಷದ ಆಜಿ ಎಂಬವರು ಸಾವನ್ನಪ್ಪಿದ್ದರು. ಇದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!