September 19, 2026
Saturday, September 19, 2026
spot_img

ಟೇಸ್ಟಿ ಪ್ಲಸ್ ಹೆಲ್ತಿ: ದಿಢೀರ್ ಆಗಿ ಮಾಡಬಹುದಾದ ಪೀನಟ್ ಬಟರ್ ಕುಕೀಸ್ ರೆಸಿಪಿ

ಪೀನಟ್ ಬಟರ್

ಸಕ್ಕರೆ ಪುಡಿ

ಗೋಧಿ ಹಿಟ್ಟು

ಬೆಣ್ಣೆ

ಬೇಕಿಂಗ್ ಪೌಡರ್

ಒಂದು ಬೌಲ್‌ಗೆ ಪೀನಟ್ ಬಟರ್, ಬೆಣ್ಣೆ ಮತ್ತೆ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕ್ರೀಮ್ ತರ ಸ್ಮೂತ್ ಆಗೋ ತನಕ ತಿರುಗಿಸಿ. ಈಗ ಗೋಧಿ ಹಿಟ್ಟು ಮತ್ತೆ ಬೇಕಿಂಗ್ ಪೌಡರ್ ಸೇರಿಸಿ ಮೆಲ್ಲಗೆ ನಾದಿ. ಹಿಟ್ಟು ತೀರಾ ಗಟ್ಟಿಯಾಗದಂತೆ, ಉಂಡೆ ಕಟ್ಟುವ ಹದಕ್ಕೆ ಬಂದರೆ ಸಾಕು. ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿ, ಅಂಗೈಲಿ ಇಟ್ಟು ಮೆಲ್ಲಗೆ ಒತ್ತಿ. ಸ್ಟವ್ ಮೇಲೆ ಒಂದು ದಪ್ಪ ತಳದ ಕಡಾಯಿ ಇಟ್ಟು, ಕೆಳಗೆ ಸಣ್ಣ ತಟ್ಟೆ ಅಥವಾ ಸ್ಟ್ಯಾಂಡ್ ಇಟ್ಟು 5 ನಿಮಿಷ ಬಿಸಿ ಮಾಡಿ. ಆಮೇಲೆ ಒಂದು ಪ್ಲೇಟ್‌ಗೆ ಸ್ವಲ್ಪ ಬೆಣ್ಣೆ ಸವರಿ, ಕುಕೀಸ್ ಇಟ್ಟು ಕಡಾಯಿಯಲ್ಲಿ ಮುಚ್ಚಿ. ಸಣ್ಣ ಉರಿಯಲ್ಲಿ 12 ರಿಂದ 15 ನಿಮಿಷ ಬೇಯಿಸಿದರೆ ಕುಕೀಸ್ ರೆಡಿ! ಬಿಸಿಯಿದ್ದಾಗ ಕೊಂಚ ಮೆತ್ತಗೆ ಅನಿಸಿದರೂ, ಆರಿದ ಮೇಲೆ ಸಖತ್ ಕ್ರಂಚಿ ಆಗಿರುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !