ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಿಇಒ ರಾಜೇಶ್ ಗೋಪಿನಾಥನ್ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಟಿ ಸೇವೆಗಳನ್ನು ನೀಡುವ ಭಾರತದ ದಿಗ್ಗಜ ಕಂಪನಿಯಾಗಿರೋ ಟಾಟಾ ಕನ್ಸಲ್ಟನ್ಸಿ ಸರ್ವೀಸ್‌ ನ ಮುಖ್ಯ ಕಾರ್ಯನಿರ್ವಾಹಕ ಸ್ಥಾನದಿಂದ ರಾಜೇಶ್‌ ಗೋಪಿನಾಥ್ ರಾಜೀನಾಮೆ ನೀಡಲಿದ್ದಾರೆ ಎಂದು ಕಂಪನಿ ಹೇಳಿದೆ.

ಜನೆವರಿಯಲ್ಲಿ ಐಟಿ ದೈತ್ಯ ಟಿಸಿಎಸ್‌ನೊಂದಿಗೆ ಆರು ವರ್ಷಗಳನ್ನು ರಾಜೇಶ್‌ ಗೋಪಿನಾಥ್‌ ಪೂರ್ಣಗೊಳಿಸಿದ್ದರು. ಕಳೆದ ವರ್ಷವಷ್ಟೇ ಅವರನ್ನು 2027ರ ವರೆಗೆ ಸಿಇಒ ಆಗಿ ಮರು ನೇಮಕಗೊಳಿಸಲಾಗಿತ್ತು. ಭಾರತೀಯ ಐಟಿ ಉದ್ಯಮವು ತನ್ನ ಪ್ರಮುಖ ಮಾರುಕಟ್ಟೆಗಳಾದ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್‌ನಲ್ಲಿ ಸವಾಲಿನ ಸ್ಥೂಲ-ಆರ್ಥಿಕ ವಾತಾವರಣವನ್ನು ಎದುರಿಸುತ್ತಿರುವ ಕಾರಣ ಈ ಬೆಳವಣಿಗೆ ನಡೆದಿದೆ.

ಪ್ರಸ್ತುತ ಕೆ ಕೃತಿವಾಸನ್ ಅವರನ್ನು ಸಿಇಒ ಎಂದು ನಿಯೋಜಿಸಲಾಗಿದ್ದು ಷೇರುದಾರರ ಅನುಮೋದನೆಗೆ ಒಳಪಟ್ಟು ಮುಂದಿನ ಹಣಕಾಸು ವರ್ಷದಲ್ಲಿ ಅವರು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1989ರಲ್ಲಿ ಟಿಸಿಎಸ್‌ ಗೆ ಸೇರಿರುವ ಕೃತಿವಾಸನ್‌ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ವಿವಿಧ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!