ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 40 ವರ್ಷಗಳಿಂದ ಭಾರತದ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮಾರುತಿ ಸುಜುಕಿ ಕಂಪನಿಯನ್ನು ದೇಶೀಯ ಕಂಪನಿ ಟಾಟಾ ಮೋಟಾರ್ಸ್ ಹಿಂದಿಕ್ಕಿದೆ.
ಹೌದು. ಇಲ್ಲಿಯವರೆಗೆ ದೇಶದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಮಾರುತಿ ಕಂಪನಿಯ ಕಾರುಗಳೇ ಮಾರಾಟವಾಗುತ್ತಿದ್ದವು. ಆದರೆ 2024 ರಲ್ಲಿ ಟಾಟಾ ಕಂಪನಿಯ ಪಂಚ್ (Tata Punch) ಅತಿ ಹೆಚ್ಚು ಮಾರಾಟವಾಗುವ ಮೂಲಕ ಮಾರುತಿಯ ದಾಖಲೆಯನ್ನು ಬ್ರೇಕ್ ಮಾಡಿದೆ.
ಅಟೋ ಕಾರು ಪ್ರೋ ವರದಿಯ ಪ್ರಕಾರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ಪಂಚ್, ಮಾರುತಿ ಸುಜುಕಿಯ ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿದೆ. ವ್ಯಾಗನ್ ಆರ್ 1,90,855 ಮಾರಾಟವಾದರೆ ಟಾಟಾ ಪಂಚ್ 2,02,030 ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ
ಮಾರುತಿ ಕಂಪನಿಯ ಕಾರು ಮೊದಲ ಸ್ಥಾನ ಪಡೆಯದೇ ಇದ್ದರೂ ಟಾಪ್-5 ರಲ್ಲಿ ಮೂರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಭಾರತದ ಗ್ರಾಹಕರು ಬೆಲೆ ಕಡಿಮೆ ಜೊತೆಗೆ ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದರು. ಆದರೆ ಈಗ ಸುರಕ್ಷತೆಯ ಜೊತೆ ಮೈಲೇಜ್ ನೀಡುವ ಕಾರುಗಳತ್ತ ಗಮನ ನೀಡುತ್ತಿದ್ದು ಕ್ಯಾಂಪಕ್ಟ್ ಎಸ್‌ಯುವಿ, ಎಸ್‌ಯುವಿ ಕಾರಿನತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ