ಏಳು ಅಂಗಸಂಸ್ಥೆಗಳ ವಿಲೀನಕ್ಕೆ ಅನುಮೋದನೆ ನೀಡಿದ ಟಾಟಾ ಸ್ಟೀಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ದೊಡ್ಡ ಉಕ್ಕು ಉತ್ಪಾದಕರ ಸಾಲಿನಲ್ಲಿರುವ ಟಾಟಾ ಸ್ಟೀಲ್‌ ಆಡಳಿತ ಮಂಡಳಿಯು ತನ್ನೊಂದಿಗೆ ಏಳು ಅಂಗಸಂಸ್ಥೆಗಳ ವಿಲೀನವನ್ನು ಅನುಮೋದಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಗುರುವಾರ ನಡೆದ ಮಂಡಳಿಯ ಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.

ಈ ಏಳು ಕಂಪನಿಗಳಲ್ಲಿ ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್, ದಿ ಟಿನ್‌ಪ್ಲೇಟ್ ಕಂಪನಿ ಆಫ್ ಇಂಡಿಯಾ, ಟಾಟಾ ಮೆಟಾಲಿಕ್ಸ್, ಟಿಆರ್‌ಎಫ್, ದಿ ಇಂಡಿಯನ್ ಸ್ಟೀಲ್ ಮತ್ತು ವೈರ್ ಪ್ರಾಡಕ್ಟ್ಸ್, ಟಾಟಾ ಸ್ಟೀಲ್ ಮೈನಿಂಗ್ ಮತ್ತು ಎಸ್ ಮತ್ತು ಟಿ ಮೈನಿಂಗ್ ಕಂಪನಿ ಗಳು ಸೇರಿವೆ.

ಪ್ರತಿ ಯೋಜನೆಯನ್ನು ಸ್ವತಂತ್ರ ನಿರ್ದೇಶಕರ ಸಮಿತಿ ಮತ್ತು ಕಂಪನಿಯ ಆಡಿಟ್ ಸಮಿತಿಯು ಪರಿಶೀಲಿಸಿದೆ ಮತ್ತು ಮಂಡಳಿಗೆ ಶಿಫಾರಸು ಮಾಡಿದೆ.

ಕಂಪನಿಯ ಮಂಡಳಿಯು ಏಳು ಗುಂಪಿನ ಕಂಪನಿಗಳ ವಿಲೀನವನ್ನು ಅನುಮೋದಿಸಿದ ನಂತರ ಶುಕ್ರವಾರದಂದು ಅಂಗಸಂಸ್ಥೆಗಳು ಶೇಕಡಾ 9 ರವರೆಗೆ ಕುಸಿದಿದ್ದರೆ ಟಾಟಾ ಸ್ಟೀಲ್ ಷೇರು ಬೆಲೆಯು ಏರಿಕೆಯಾಯಿತು. ಬಿಎಸ್‌ಇಯಲ್ಲಿ ಟಾಟಾ ಸ್ಟೀಲ್ ಷೇರು ಶೇ.1.30ರಷ್ಟು ಹೆಚ್ಚಾಗಿ ₹105ರಲ್ಲಿ ವಹಿವಾಟು ನಡೆಸುತ್ತಿದೆ.

ಟಾಟಾ ಸ್ಟೀಲ್‌ನೊಂದಿಗೆ ವಿಲೀನಗೊಳ್ಳಲಿರುವ ಏಳು ಟಾಟಾ ಗ್ರೂಪ್ ಕಂಪನಿಗಳಲ್ಲಿ ನಾಲ್ಕು ಕಂಪನಿಗಳು ಲಿಸ್ಟೆಡ್‌ ಆಗಿದ್ದು. ನಾಲ್ಕೂ ಕಂಪನಿಗಳು ಭಾರೀ ನಷ್ಟದೊಂದಿಗೆ ವಹಿವಾಟು ನಡೆಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!