ಎಪಿ ಕೊತಕೊತ: ಉಪವಾಸ ಸತ್ಯಾಗ್ರಹ ಕೈಗೊಂಡ ಟಿಡಿಪಿ ನಾಯಕರು, ರಾಜ್ಯಪಾಲರ ಭೇಟಿಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಬಾಬು ಬಂಧನದ ವಿಚಾರವಾಗಿ ಆಂಧ್ರಪ್ರದೇಶ ಕೊತ ಕೊತ ಕುದಿಯುತ್ತಿದೆ. ಎಲ್ಲಿ ನೋಡದರೂ ಪ್ರತಿಭಟನೆಯ ಕಾವು ಜೋರಾಗಿದೆ. ಈ ನಡುವೆ ಭಾನುವಾರ ಬೆಳಗ್ಗೆ ಟಿಡಿಪಿ ನಾಯಕರ ಗುಂಪು ಎಪಿ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ಭೇಟಿ ಮಾಡಲಿದೆ. 9.45ಕ್ಕೆ ರಾಜ್ಯಪಾಲರ ಅಪಾಯಿಂಟ್‌ಮೆಂಟ್‌ ಕೇಳಿದ್ದು, ಅನುಮತಿ ಸಿಕ್ಕಿದೆ.

ವಾಸ್ತವವಾಗಿ ಶನಿವಾರ ಸಂಜೆಯೇ ಟಿಡಿಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಬೇಕಿತ್ತು. ಸಂಜೆ 7.30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಲು ಅನುಮತಿ ನೀಡಲಾಗಿತ್ತಾದರೂ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಭಾನುವಾರ ರಾಜ್ಯಪಾಲರನ್ನು ಭೇಟಿ ಮಾಡಲು ಟಿಡಿಪಿ ಮುಖಂಡರು ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರ ಜೊತೆ ಸೇರಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ವೈಕಾಪಾ ಸರ್ಕಾರ ಅಕ್ರಮವಾಗಿ ಬಂಧಿಸಿದೆ ಎಂದು ದೂರಲಿದ್ದಾರೆ.

ಚಂದ್ರಬಾಬು ಅವರ ಬಂಧನವನ್ನು ವಿರೋಧಿಸಿ ತೆಲುಗು ದೇಶಂ ಪಕ್ಷದ ರಾಜ್ಯಾಧ್ಯಕ್ಷ ಅಚ್ಚೆನಾಯ್ಡು ಅವರು ಭಾನುವಾರ ರಾಜ್ಯಾದ್ಯಂತ ಬೃಹತ್ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ. ಚಂದ್ರಬಾಬು ಅಕ್ರಮ ಬಂಧನ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಪೊಲೀಸ್ ದಾಳಿ, ಅಕ್ರಮ ಪ್ರಕರಣಗಳ ವಿರುದ್ಧ ಭಾನುವಾರ ಪ್ರತಿಭಟನೆ ನಡೆಸಲಿದ್ದಾರೆ. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಟಿಡಿಪಿ ನಾಯಕರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅಚ್ಚೆನ್ನಾಯ್ಡು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!