ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ದಲಿತ ಸಮುದಾಯಕ್ಕೆ ಸೇರಿದ ಆರು ಮಕ್ಕಳಿಂದ ಕಳೆದ ಒಂದು ವರ್ಷದಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.
ಇದೀಗ ಇಲ್ಲಿನ ಎರೋಡ್ ಜಿಲ್ಲೆಯ ತೊಪ್ಪುಪಾಳಯಂ ಗ್ರಾಮದಲ್ಲಿರುವ ಯೂನಿಯನ್ ಪ್ರೈಮರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆ. ಗೀತಾರಾಣಿ (53) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಒಂದು ವರ್ಷದಿಂದ ಬಲವಂತ ಮಾಡಿ ಆರು ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಐದನೇ ತರಗತಿ ವಿದ್ಯಾರ್ಥಿಯೊಬ್ಬನ ತಾಯಿ ದೂರು ನೀಡಿದ್ದು, ಇದಾದ ಬಳಿಕ ಗೀತಾರಾಣಿ ಪರಾರಿಯಾಗಿದ್ದರು.ಆದರೆ ಇದೀಗ ಪೊಲೀಸರು ಗೀತಾರಾಣಿಯನ್ನು ಬಂಧಿಸಿದ್ದಾರೆ.
ಬಾಲಕನಿಗೆ ಜ್ವರ ಬಂದಿದ್ದು, ಆತನ ತಾಯಿಯು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ, ಬಾಲಕನು ಶೌಚಾಲಯ ಸ್ವಚ್ಛಗೊಳಿಸುವ ಕುರಿತು ತಾಯಿಗೆ ವಿವರಿಸಿದ್ದಾನೆ. ಇದೇ ರೀತಿ ಆರು ವಿದ್ಯಾರ್ಥಿಗಳಿಂದ ಶಾಲೆಯಲ್ಲಿರುವ ಎರಡು ಶೌಚಾಲಯಗಳನ್ನು ತೊಳಿಸಿದ್ದಾರೆ ಎಂಬುದು ಗೊತ್ತಾಗಿದೆ. ಇದಾದ ಬಳಿಕ ಬಾಲಕನ ತಾಯಿಯು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.