ಕ್ಲಾಸ್‌ ಅವರ್ಸ್‌ನಲ್ಲಿ ಕ್ಯಾಂಡಿ ಕ್ರಶ್‌ ಆಡ್ತಾ ಕೂತಿದ್ದ ಶಿಕ್ಷಕ ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ಲಾಸ್‌ ಅವರ್ಸ್‌ನಲ್ಲಿ ಕ್ಯಾಂಡಿ ಕ್ರಶ್‌ ಆಡುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಮಕ್ಕಳಿಗೆ ಪಾಠ ಮಾಡುವ ಸಮಯದಲ್ಲಿ ಮೊಬೈಲ್​ ಹಿಡಿದು ಕ್ಯಾಂಡಿಕ್ರಶ್​ ಆಟವಾಡುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಪರಿಶೀಲನೆಗಾಗಿ ಶಾಲೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಪುಸ್ತಕ ತೆಗೆದು ನೋಡಿದಾಗ ಹೆಚ್ಚಿನ ತಪ್ಪುಗಳು ಎದ್ದು ಕಾಣಿಸಿದ್ದವು ಈ ಕುರಿತು ಮಕ್ಕಳನ್ನು ವಿಚಾರಿಸಿದಾಗ ಇದು ತಿಳಿದಿದೆ. ಕರ್ತವ್ಯದ ಸಮಯದಲ್ಲಿ ಗಂಟೆಗಳ ಕಾಲ ಕ್ಯಾಂಡಿಕ್ರಷ್ ಆಡಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಶಾಲಾ ಸಮಯದಲ್ಲಿ ಮೊಬೈಲ್ ಫೋನ್​ಗಳನ್ನು ಬಳಸುವುದು ಸೂಕ್ತವಲ್ಲ, ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪನ್ಸಿಯಾ ಅವರು ಆರು ವಿದ್ಯಾರ್ಥಿಗಳ ಹೋಂವರ್ಕ್​ನಲ್ಲಿ ಆರು ಪುಟಗಳನ್ನು ಪರಿಶೀಲಿಸಿದರು ಮತ್ತು 95 ತಪ್ಪುಗಳನ್ನು ಗುರುತಿಸಿದ್ದಾರೆ.

ಒಂಬತ್ತು ಮೊದಲ ಪುಟದಲ್ಲಿಯೇ ಇತ್ತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಸಹಾಯಕ ಶಿಕ್ಷಕಿ ಪ್ರಿಯಾಂ ಗೋಯಲ್ ಅವರ ಫೋನ್ ಪರಿಶೀಲಿಸಿದರು. ಶಿಕ್ಷಕರು ಮೊಬೈಲ್​ನಲ್ಲಿ ಕ್ಯಾಂಡಿಕ್ರಷ್ ಪ್ರತಿದಿನ ಒಂದೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ಉಪಯೋಗಿಸುತ್ತಾರೆ ಎಂಬುದು ತಿಳಿದುಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!