ಹೊಸದಿಗಂತ ಡಿಜಿಟಲ್ ಡೆಸ್ಕ್;
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲು ಭಾರತ ತಂಡ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟಿ20 ಸರಣಿ ನಡೆಯಲ್ಲಿದ್ದು, ಸರಣಿಯ ಮೊದಲ ಪಂದ್ಯ ನವೆಂಬರ್ 8 ರಂದು ನಡೆದರೆ ಕೊನೆಯ ಪಂದ್ಯ ನವೆಂಬರ್ 15 ರಂದು ನಡೆಯಲಿದೆ. ಈ ನಾಲ್ಕು ಪಂದ್ಯಗಳು ಆಫ್ರಿಕಾದ ನಾಲ್ಕು ನಗರಗಳಲ್ಲಿ ಡರ್ಬನ್, ಗೆಕೆಬರ್ಹಾ, ಸೆಂಚುರಿಯನ್ ಮತ್ತು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿವೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 9:30 ಕ್ಕೆ ಆರಂಭವಾಗಲಿವೆ. ಟಾಸ್ ರಾತ್ರಿ 9 ಗಂಟೆಗೆ ನಡೆಯಲಿದೆ.
ಟಿ20 ಸರಣಿಯ ಸಂಪೂರ್ಣ ವೇಳಾಪಟ್ಟಿ
ಮೊದಲನೇ ಟಿ20: 8 ನವೆಂಬರ್, ಡರ್ಬನ್, ರಾತ್ರಿ 9:30
ಎರಡನೇ ಟಿ20: 10 ನವೆಂಬರ್, ಗಿಕ್ಬರ್ಹಾ, ರಾತ್ರಿ 9:30
ಮೂರನೇ ಟಿ20: 13 ನವೆಂಬರ್ , ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್, ರಾತ್ರಿ 9:30
ನಾಲ್ಕನೇ ಟಿ20: 15 ನವೆಂಬರ್, ಜೋಹಾನ್ಸ್‌ಬರ್ಗ್, ರಾತ್ರಿ 9:30
ಟಿ20 ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವೈಶಾಖ್ ವಿಜಯಕುಮಾರ್, ಅವೇಶ್ ಖಾನ್ ಮತ್ತು ಯಶ್ ದಯಾಳ್.