ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮ್ಯಾಚ್ ನೋಡಿದ್ದಕ್ಕೂ ಸಾರ್ಥಕವಾಗಿದೆ. ನಮ್ಮ ಟೀಂ ಇಂಡಿಯಾ T20 World Cup 2026ನಲ್ಲಿ ಸಾಧನೆ ಮಾಡಿದ್ದು, ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇದರ ಜತೆಗೆ ಈ ಬಾರಿಯ ಗೆಲುವಿನಿಂದಾಗಿ ಮೂರು ದಾಖಲೆಗಳನ್ನು ನಿರ್ಮಿಸಿದೆ. ಯಾವುದೀ ಮೂರು ದಾಖಲೆ?
ಮೂರು ವಿಶ್ವಕಪ್ ಗೆದ್ದ ಮೊದಲ ಟೀಂ ನಮ್ಮದು. ಇತಿಹಾಸದಲ್ಲೇ ಯಾವ ಟೀಂ ಕೂಡ ಈ ಸಾಧನೆ ಮಾಡಿಲ್ಲ. 2007, 2024 ರಲ್ಲಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದ ಭಾರತ ಇದೀಗ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ತವರಿನಲ್ಲಿ ವರ್ಲ್ಡ್ ಕಪ್ ಗೆದ್ದ ಮೊದಲ ತಂಡ ಭಾರತ. ಹೌದು, ಈವರೆಗೂ ತವರಿನಲ್ಲಿ ಆಡಿ ಯಾವುದೇ ತಂಡ ಚಾಂಪಿಯನ್ ಆಗಿಲ್ಲ.
ಚಾಂಪಿಯನ್ ಪಟ್ಟ ಪಡೆದು ಉಳಿಸಿಕೊಂಡ ಮೊದಲ ಟೀಂ ನಮ್ಮ ಇಂಡಿಯಾ. 2024 ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ಇದೀಗ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.



