ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಗೆಲುವು ಸಾಧಿಸಿ 2 ಟೆಸ್ಟ್‌ಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇತ್ತ ಗೆಲುವಿನ ಖುಷಿಯಲ್ಲಿರುವ ಆಟಗಾರರರು ಮತ್ತೊಂದು ಐತಿಹಾಸಿಕ ಪಂದ್ಯ ನೋಡಲು ತಯಾರಿ ನಡೆಸುತ್ತಿದೆ. ಅದುವೇ ಫಿಫಾ .
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕೆಎಲ್ ರಾಹುಲ್ ಬಹಿರಂಗಪಡಿಸಿದ್ದು, ಫಿಫಾ ವಿಶ್ವಕಪ್ ಫೈನಲ್ನಲ್ಲಿ ಯಾವ ತಂಡವನ್ನು ಬೆಂಬಲಿಸುವುದಾಗಿ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ತಂಡದ ಬಹುತೇಕ ಆಟಗಾರರು ಬೆಂಬಲಿಸುತ್ತಿದ್ದ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಭಾರತದ ಹೆಚ್ಚಿನ ಆಟಗಾರರು ಬ್ರೆಜಿಲ್ ಮತ್ತು ಇಂಗ್ಲೆಂಡ್ ತಂಡದ ಅಭಿಮಾನಿಗಳಾಗಿದ್ದರು. ಆದರೆ ಈ ಎರಡೂ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ ಈಗ ನಾವು ಅಂತಿಮ ಪಂದ್ಯವನ್ನು ಆನಂದಿಸುತ್ತೇವೆ ಎಂದಿದ್ದಾರೆ.
ಫೈನಲ್ನಲ್ಲಿರುವ ಅರ್ಜೆಂಟೀನಾವನ್ನು ಯಾರು ಬೆಂಬಲಿಸುತ್ತಿದ್ದಾರೆ ಅಥವಾ ಫ್ರಾನ್ಸ್ ತಂಡವನ್ನು ಯಾರು ಬೆಂಬಲಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಇಡೀ ತಂಡವು ಇಂದು ರಾತ್ರಿ ಡಿನ್ನರ್ ಜೊತೆ ಫೈನಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಲಿದೆ. ಈ 5 ದಿನಗಳು ತುಂಬಾ ಆಯಾಸವಾಗಿತ್ತು. ಇದೀಗ ಫೈನಲ್ ಪಂದ್ಯ ವೀಕ್ಷಿಸಿದ ಬಳಿಕ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.