ದೀಪಿಕಾ ಹಾಕಿರುವ ಬಿಕಿನಿ ಅಶ್ಲೀಲವಷ್ಟೇ ಅಲ್ಲ, ಪ್ರಚೋದನಕಾರಿ: ಮುಕೇಶ್ ಖನ್ನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಅದ್ರಲ್ಲೂ ಬೇಷರಂ ಹಾಡಿನಲ್ಲಿ ವಿರುದ್ಧ ಎಲ್ಲೆಡೆ ನಾನಾ ಮಾತುಗಳು ಕೇಳಿಬರುತ್ತಿದೆ.

ಇದೀಗ ಈ ಕುರಿತು ಶಕ್ತಿಮಾನ್ ಪಾತ್ರಧಾರಿ ಮುಕೇಶ್ ಖನ್ನಾ ಪ್ರತಿಕ್ರಿಯೆ ನೀಡಿದ್ದು,ದೀಪಿಕಾ ಹಾಕಿರುವ ಬಿಕಿನಿ ಕೇವಲ ಅಶ್ಲೀಲವಷ್ಟೇ ಅಲ್ಲ, ಅದು ಪ್ರಚೋದನಕಾರಿ ಕೂಡ ಆಗಿದೆ ಎಂದು ಹೇಳಿದ್ದಾರೆ.

ಇಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವುದು ಪ್ರಶ್ನೆಯಲ್ಲ. ಅದು ಚರ್ಚೆಯ ವಿಷಯ ಕೂಡ ಆಗಬಾರದು. ಚರ್ಚೆ ಮಾಡಬೇಕಾಗಿದ್ದು ಪ್ರಚೋದನಕಾರಿ ಆಗುವಂತಹ ಬಟ್ಟೆಗಳನ್ನು ಹಾಕಿದ್ದಾರೆ ಎನ್ನುವುದು.

ಅಚ್ಚರಿಯ ಸಂಗತಿ ಏನೆಂದರೆ , ನಟಿಯೊಬ್ಬಳು ಪ್ರಚೋದನಕಾರಿ ಆಗುವಂತಹ ಬಟ್ಟೆ ಮತ್ತು ಭಂಗಿಯಲ್ಲಿ ಇದ್ದಾರೆ ಎನ್ನುವ ಅಂಶವನ್ನು ಸೆನ್ಸಾರ್ ಮಂಡಳಿಯು ಗಮನಿಸದೇ ಇರುವುದು. ಯಾಕೆಂದರೆ ಈ ಹಾಡನ್ನು ವಿವೇಚನೆ ಇಲ್ಲದೇ ಸೆನ್ಸಾರ್ ಮಾಡಿದ್ರಾ ಎಂಬ ಪ್ರಶ್ನೆ ಹುಟ್ಟುಕೊಳ್ಳುತ್ತಿದೆ. ಮಂಡಳಿಯಲ್ಲಿ ಇರುವವರು ವಿವೇಚನೆ ಬಳಸಿಕೊಂಡು ಸೆನ್ಸಾರ್ ಮಾಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!