ಬಾಂಗ್ಲಾ ಸರಣಿ ಸೋತ ಟೀಮ್ ಇಂಡಿಯಾ: ನಾಯಕ ರೋಹಿತ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಬಾಂಗ್ಲಾದೇಶ ತಂಡವು 2-0 ಅಂತರದಲ್ಲಿ ಸರಣಿ ಗೆದ್ದಿದೆ.

ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ 5 ರನ್‌ ರೋಚಕ ಸೋಲು ಅನುಭವಿಸುವ ಮೂಲಕ ಸರಣಿ ಕೈಚೆಲ್ಲಿದೆ. ಇದೀಗ ಸೋಲಿನ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ, ಕಾರಣ ತಿಳಿಸಿದ್ದಾರೆ.

ಮಧ್ಯಮ ಓವರ್‌ಗಳು ಹಾಗೂ ಬ್ಯಾಟರ್‌ಗಳ ದೊಡ್ಡ ಮೊತ್ತದ ಜತೆಯಾದ ಕೊರತೆಯೇ ಟೀಂ ಇಂಡಿಯಾ ಸೋಲಿಗೆ ಕಾರಣ . ಒಂದು ಪಂದ್ಯ ಸೋತರೆ ಅದರಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳು ಇರುತ್ತವೆ. 69 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದರಿಂದ ಹಿಡಿದು 270+ ರನ್‌ ಬಿಟ್ಟುಕೊಟ್ಟಿದ್ದರವರೆಗೆ. ಕೊನೆಯಲ್ಲಿ ಬೌಲರ್‌ಗಳ ಪ್ರಯತ್ನ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾವು ಆರಂಭದಲ್ಲಿ ಉತ್ತಮವಾಗಿಯೇ ಬೌಲಿಂಗ್ ಮಾಡಿದೆವು. ಆದರೆ ಮಧ್ಯಮ ಓವರ್‌ಗಳು ಹಾಗೂ ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡುವ ಮೂಲಕ ಸಾಕಷ್ಟು ದುಬಾರಿಯಾದೆವು. ಈ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್ ಮಾದರಿಯ ಬಗ್ಗೆ ಹೇಳಬೇಕೆಂದರೆ, ಜತೆಯಾಟ ಸಾಕಷ್ಟು ಮಹತ್ವದ್ದಾಗುತ್ತದೆ. ಒಂದು ಜತೆಯಾಟ ಮೂಡಿ ಬರುತ್ತಿದೆ ಎಂದಾದರೇ ಆ ಜತೆಯಾಟವನ್ನು ಮ್ಯಾಚ್ ವಿನ್ನಿಂಗ್ ಜತೆಯಾಟವಾಗಿ ಬದಲಾಯಿಸಬೇಕು. ಅವರು ಹಾಗೆಯೇ ಮಾಡಿದರು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!