Sunday, March 26, 2023

Latest Posts

ಬ್ಯಾಟಿಂಗ್ ನಲ್ಲಿ ಮ್ಯಾಜಿಕ್ ಮಾಡದ ಟೀಮ್ ಇಂಡಿಯಾ: ಆಸೀಸ್‌ ಗೆಲುವಿಗೆ ಸುಲಭ ಟಾರ್ಗೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ : 

ಆಸ್ಟ್ರೇಲಿಯಾ ವಿರುದ್ದದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮಾಡಲು ವಿಫಲವಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ,ಎರಡನೇ ಇನ್ನಿಂಗ್ಸ್‌ನಲ್ಲಿ 163 ರನ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 76 ರನ್ ಸುಲಭ ಟಾರ್ಗೆಟ್ ನೀಡಲಾಗಿದೆ. ಗುರಿ ಅಲ್ಪ ಕಾರಣ ಆಸ್ಟ್ರೇಲಿಯಾಗೆ ಗೆಲುವಿನ ಶೇಕಡ ಹೆಚ್ಚಿದೆ.

ಶುಭ್‌ಮನ್ ಗಿಲ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ನಾಯಕ ರೋಹಿತ್ ಶರ್ಮಾ 12 ರನ್ ಸಿಡಿಸಿ ಔಟಾದರು.ಇತ್ತ ವಿರಾಟ್ ಕೊಹ್ಲಿ 13 ರನ್ ಸಿಡಿಸಿ ನಿರ್ಗಮಿಸಿದರು. ಪೂಜಾರ ಹೋರಾಟ ಭಾರತಕ್ಕೆ ನೆರವಾಯಿತು. ಆದರೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ರವೀಂದ್ರ ಜಡೇಜಾ 7 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ ಹಾಗೂ ಪೂಜಾರ ಜೊತೆಯಾಟದಿಂದ ಟೀಂ ಇಂಡಿಯಾ ಉಸಿರಾಡಿತು. ಆದರ ಶ್ರೇಯಸ್ ಅಯ್ಯರ್ 26 ರನ್ ಸಿಡಿಸಿ ನಿರ್ಗಮಿಸಿದರು. ಶ್ರೀಕಾರ್ ಭರತ್ 3 ರನ್ ಸಿಡಿಸಿ ಔಟಾದರು. ರವಿಚಂದ್ರ ಅಶ್ವಿನ್ 16 ರನ್ ಕಾಣಿಕೆ ನೀಡಿದರು.ಇತ್ತ ಚೇತೇಶ್ವರ್ ಪೂಜಾರ 59 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಅಂತಿಮ ಹಂತದಲ್ಲಿ ಹೋರಾಟ ಮುಂದುವರಿಸಿದರು. ಆದರೆ ಉಮೇಶ್ ಯಾದವ್ ಡಕೌಟ್ ಆದರು. ಇತ್ತ ಸಿರಾಜ್ ಜೊತೆ ಸೇರಿ ಅಕ್ಸರ್ ಇನ್ನಿಂಗ್ಸ್ ಮುಂದುವರಿಸಿದರು. ಅಕ್ಸರ್ ಪಟೇಲ್ ಅಜೇಯ 15 ರನ್ ಸಿಡಿಸಿದರು. ಸಿರಾಜ್ ವಿಕೆಟ್ ಪತನದೊಂದಿಗೆ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 163 ರನ್‌ಗಳಿಗೆ ಆಲೌಟ್ ಆಯಿತು.
ಈ ಮೂಲಕ 75 ರನ್ ಮುನ್ನಡೆ ಪಡೆಯಿತು. ಇದೀಗ ಆಸ್ಟ್ರೇಲಿಯಾ ಗೆಲುವಿಗೆ 76 ರನ್ ಸಿಡಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!