ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಹಾಲಿಯಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ನಾಯಕ ಕೆಎಲ್ ರಾಹುಲ್ ಅವರ ಅಜೇಯ 58 ರನ್‌ಗಳ ಇನ್ನಿಂಗ್ಸ್ ಹಾಗೂ ಆರಂಭಿಕರಿಬ್ಬರ ಉತ್ತಮ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ.
277 ರನ್ ಗಳ ಗುರಿ ಬೆನ್ನತ್ತಿದ ಇಂಡಿಯಾಕ್ಕೆ ಗಿಲ್, ಗಾಯಕ್ವಾಡ್, ಸೂರ್ಯಕುಮಾರ್ ಮತ್ತು ನಾಯಕ ಕೆ.ಎಲ್ ರಾಹುಲ್ ಅವರ ಅರ್ಧಶತಕದ ಬ್ಯಾಟಿಂಗ್ ಬಲ ಗೆಲುವನ್ನು ತಂದುಕೊಟ್ಟಿತು. ಈ ಮೂಲಕ ಸರಣಿ 1-0 ಮುನ್ನಡೆ ಸಾಧಿಸಿದೆ.