February 3, 2026
Tuesday, February 3, 2026
spot_img

ಟಿ20 ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲಿರುವ ಟೀಮ್ ಇಂಡಿಯಾದ ‘ಫೈವ್ ಸ್ಟಾರ್’ ಕಿಲಾಡಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 2026ರ ಟಿ20 ವಿಶ್ವಕಪ್‌ಗೆ ವೇದಿಕೆ ಸಿದ್ಧವಾಗಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ಈ ಬಾರಿ ಸಂಪೂರ್ಣ ಯುವ ಪಡೆಯನ್ನು ನಂಬಿಕೊಂಡು ಮೈದಾನಕ್ಕಿಳಿಯುತ್ತಿದೆ. ಫೆಬ್ರವರಿ 7 ರಂದು ಅಮೆರಿಕ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ ಜಯದ ಆರಂಭದ ನಿರೀಕ್ಷೆಯಲ್ಲಿದೆ.

ವಿಶೇಷವೆಂದರೆ, ಈ ಬಾರಿ ಭಾರತದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲಿರುವ ಪ್ರಮುಖ ಐವರು ಆಟಗಾರರಿಗೆ ಇದು ಮೊದಲ ಟಿ20 ವಿಶ್ವಕಪ್ ಆಗಿದೆ. ಹಿರಿಯ ಆಟಗಾರರ ನಿವೃತ್ತಿಯ ನಂತರ ತಂಡದ ಜವಾಬ್ದಾರಿ ಹೊತ್ತಿರುವ ಈ ಯುವ ಆಟಗಾರರ ಪಟ್ಟಿ ಇಲ್ಲಿದೆ:

ರೋಹಿತ್ ಶರ್ಮಾ ನಿವೃತ್ತಿಯ ಬಳಿಕ ಸ್ಫೋಟಕ ಬ್ಯಾಟಿಂಗ್‌ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್, ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿದ್ದಾರೆ. 38 ಪಂದ್ಯಗಳಲ್ಲಿ ಸುಮಾರು 194.74 ರ ಸ್ಟ್ರೈಕ್ ರೇಟ್‌ನಲ್ಲಿ 1297 ರನ್ ಗಳಿಸಿರುವುದು ಇವರ ಸಾಮರ್ಥ್ಯಕ್ಕೆ ಸಾಕ್ಷಿ.

ಇದನ್ನೂ ಓದಿ:

ವಿರಾಟ್ ಕೊಹ್ಲಿ ತೆರವುಗೊಳಿಸಿದ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. 2023 ರಲ್ಲಿ ಪದಾರ್ಪಣೆ ಮಾಡಿದ ಇವರು 40 ಪಂದ್ಯಗಳಿಂದ 1183 ರನ್ ಗಳಿಸಿ ತಂಡದ ಆಧಾರಸ್ತಂಭವಾಗಿದ್ದಾರೆ.

ಕಳೆದ ವಿಶ್ವಕಪ್‌ನಲ್ಲಿ ಮೀಸಲು ಆಟಗಾರನಾಗಿದ್ದ ರಿಂಕು, ಈ ಬಾರಿ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 161.05 ರ ಸ್ಟ್ರೈಕ್ ರೇಟ್ ಹೊಂದಿರುವ ಇವರು ಡೆತ್ ಓವರ್‌ಗಳಲ್ಲಿ ಭಾರತದ ಬಹುದೊಡ್ಡ ಶಕ್ತಿಯಾಗಲಿದ್ದಾರೆ.

2017 ರಲ್ಲೇ ಪದಾರ್ಪಣೆ ಮಾಡಿದ್ದರೂ, ಗಾಯ ಮತ್ತು ಇತರ ಕಾರಣಗಳಿಂದ ವಿಶ್ವಕಪ್‌ನಿಂದ ದೂರ ಉಳಿದಿದ್ದ ಸುಂದರ್, ಬರೋಬ್ಬರಿ 9 ವರ್ಷಗಳ ಕಾಯುವಿಕೆಯ ನಂತರ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.

ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರೊಂದಿಗೆ ವೇಗದ ಬೌಲಿಂಗ್ ವಿಭಾಗವನ್ನು ಹರ್ಷಿತ್ ರಾಣಾ ಹಂಚಿಕೊಳ್ಳಲಿದ್ದಾರೆ. ಕಳೆದ ವರ್ಷವಷ್ಟೇ ಪದಾರ್ಪಣೆ ಮಾಡಿದ್ದ ಇವರು ಅತಿ ಕಡಿಮೆ ಅವಧಿಯಲ್ಲಿ ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯರ ಅನುಭವ ಹಾಗೂ ಯುವಕರ ವೇಗ ಎರಡನ್ನೂ ಮೈಗೂಡಿಸಿಕೊಂಡಿರುವ ಟೀಮ್ ಇಂಡಿಯಾ, ತವರಿನಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಕನಸು ಕಾಣುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !