ದಾಖಲೆಗಳ ಪುಟ ಸೇರಿದ ಟೀಮ್ ಇಂಡಿಯಾದ ಗೆಲುವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದ್ದು,ಈ ಮೂಲಕ ಹಲವು ದಾಖಲೆ ಬರೆದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವೇಗಿಗಳು ಲಂಕಾ ನಾಯಕನ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದರು.ಕೇವಲ 15.2 ಓವರ್​ಗಳಲ್ಲಿ 50 ರನ್​ಗಳಿಸಿ ಸರ್ವಪತನ ಕಂಡಿತು.

ಇತ್ತ ಕೇವಲ 51 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಲ 6.1 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಹಲವು ದಾಖಲೆಗಳು ಟೀಮ್ ಇಂಡಿಯಾ ಪಾಲಾಯಿತು. ಆ

ಫೈನಲ್‌ನಲ್ಲಿ ಅತಿ ದೊಡ್ಡ ಗೆಲುವು
ಏಕದಿನ ಕ್ರಿಕೆಟ್​ನ ಫೈನಲ್ ಪಂದ್ಯದಲ್ಲಿ ಅತೀ ದೊಡ್ಡ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸೀಸ್ ಪಡೆದ 2003 ರಲ್ಲಿ 226 ಎಸೆತಗಳು ಬಾಕಿಯಿರುವಂತೆ ಗೆಲುವು ದಾಖಲಿಸಿತ್ತು. ಇದೀಗ ಟೀಮ್ ಇಂಡಿಯಾ 263 ಎಸೆತಗಳನ್ನು ಉಳಿಸಿ ಅಮೋಘ ಗೆಲುವು ದಾಖಲಿಸಿದೆ.

ಅತೀ ಕಡಿಮೆ ಬೌಲ್​ ಮಾಡಿದ ಪಂದ್ಯ
ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ 15.2 ಓವರ್​ಗಳನ್ನು ಎಸೆದರೆ, ಶ್ರೀಲಂಕಾ ಕೇವಲ 6.1 ಓವರ್​ ಬೌಲ್ ಮಾಡಿದೆ. ಅಂದರೆ ಕೇವಲ 129 ಎಸೆತಗಳಲ್ಲಿ ಪಂದ್ಯ ಮುಗಿದಿದೆ. ಇದು ಏಕದಿಕ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳ ಮೂರನೇ ಏಕದಿನ ಪಂದ್ಯವಾಗಿದೆ.

ಟೀಮ್ ಇಂಡಿಯಾದ ಅತೀ ದೊಡ್ಡ ಗೆಲುವು
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ಟೀಮ್ ಇಂಡಿಯಾ ಅತೀ ದೊಡ್ಡ ಗೆಲುವಾಗಿದೆ. ಏಕೆಂದರೆ ಭಾರತ ತಂಡವು ಈ ಪಂದ್ಯದಲ್ಲಿ 263 ಎಸೆತಗಳನ್ನು ಉಳಿಸಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಫೈನಲ್​ನಲ್ಲಿ 10 ವಿಕೆಟ್​ಗಳ ಭರ್ಜರಿ ಜಯ
ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 2ನೇ ಬಾರಿ ಫೈನಲ್ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ 1998 ರಲ್ಲಿ ಝಿಂಬಾಬ್ವೆ ವಿರುದ್ಧ ಅಮೋಘ ಗೆಲುವು ದಾಖಲಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!