ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಂಭು ಗಡಿಯಿಂದ ದೆಹಲಿಗೆ ತೆರಳುತ್ತಿದ್ದ ರೈತರ ಜಾಥಾದ ಮೇಲೆ ಭದ್ರತಾ ಪಡೆಗಳು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆ.
ಶಂಭು ಗಡಿಯಿಂದ ಪೊಲೀಸರು ಭಾರೀ ಉಕ್ಕಿನ ಬ್ಯಾರಿಕೇಡ್‌ಗಳ ಮೂಲಕ ರೈತರ ಮೇಲೆ ಅಶ್ರುವಾಯು ಮತ್ತು ಜಲ ಕ್ಯಾನನ್‌ಗಳನ್ನು ಸಿಂಪಡಿಸುತ್ತಿರುವುದು ಚಿತ್ರದಲ್ಲಿ ತೋರಿಸಲಾಗಿದೆ.
ಹರಿಯಾಣದ ಶಂಭು ಗಡಿ ಭಾಗದಿಂದ ದೆಹಲಿಗೆ ಮೆರವಣಿಗೆ ಹೊರಟಿದ್ದ 101 ರೈತರ ಜಾಥಾವನ್ನು ಪೊಲೀಸರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆದರು.
ಪೊಲೀಸರು ಕ್ರಮವು ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು, ರೈತರು ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ಮುಂದುವರಿಸಲು ಅನುಮತಿ ನೀಡುವಂತೆ ಭದ್ರತಾ ಪಡೆಗಳಿಗೆ ಮನವಿ ಮಾಡಿದರು.