Thursday, December 8, 2022

Latest Posts

ಸಿನಿಮಾ ನೋಡಿ ಕಣ್ಣೀರು ಬಂತು: ಕಾಂತಾರಕ್ಕೆ ಫಿದಾ ಆದ ಬಾಲಿವುಡ್ ನಟ ಸುನಿಲ್ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದಲ್ಲಿ ಕಾಂತಾರ ಸಿನಿಮಾದ ಹವಾ ಇನ್ನು ಕಡಿಮೆಯಾಗಿಲ್ಲ. ಸಿನಿ ಅಭಿಮಾನಿಗಳು ಚಿತ್ರಮಂದಿರದತ್ತ ತೆರಳಿ ಸಿನಿಮಾವನ್ನು ವೀಕ್ಷಿಸುತ್ತಿದ್ದು, ಅನೇಕ ಕಡೆ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಅಭಿಮಾನಿಗಳ ಜೊತೆ ಅನೇಕ ಮಂದಿ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರ ಜೊತೆಗೆ ಸಿನಿ ಗಣ್ಯರು ಸಹ ರಿಷಬ್ ಶೆಟ್ಟಿ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ.

ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಗಣ್ಯರು ಕಾಂತಾರಗೆ ಮನಸೋತಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನೋಡಿ ಕಣ್ಣೀರು ಬಂತು ಎಂದು ಹೇಳಿದ್ದಾರೆ.

ಸುನಿಲ್ ಶೆಟ್ಟಿ ಆಂಗ್ಲ ಮಾಧ್ಯಮಕ್ಕೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಕಾಂತಾರ ಬಗ್ಗೆ ಮಾತನಾಡಿದ್ದು, ‘ಧಾರವಿ ಬ್ಯಾಂಕ್’ ವೆಬ್ ಸೀರಿಸ್ ರಿಲೀಸ್‌ಗೆ ಕಾಯುತ್ತಿದ್ದಾರೆ. ಸದ್ಯ ಈ ಸೀರಿಸ್‌ನ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ಸುನಿಲ್ ಶೆಟ್ಟಿ. ಭೂತಕೋಲ, ದೈವಾರಾಧನೆ ಬಗ್ಗೆ ಸುನಿಲ್ ಶೆಟ್ಟಿ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಹಾಗಾಗಿ ಈ ಸಿನಿಮಾ ಕರಾವಳಿ ಮೂಲದ ನಟ ಸುನಿಲ್ ಶೆಟ್ಟಿಗೆ ಕನೆಕ್ಟ್ ಆಗಿದೆ.

‘ನಾನು ಈ ಸಿನಿಮಾ ನೋಡಿದೆ. ಪಿವಿಆರ್‌ನಲ್ಲಿ ಶೇ.60ರಷ್ಟು ಜನ ಇದ್ದರು. ಸಿನಿಮಾದ ಕೊನೆಯ 20-25 ಸಿನಿಮಾ ನನಗೆ ಗೂಸ್‌ಬಂಪ್ಸ್ ಮತ್ತು ಕಣ್ಣೀರು ಬಂತು. ಯಾಕೆಂದರೆ ನನಗೆ ಆ ಸ್ಥಳ ಗೊತ್ತು. ನಾನು ಪ್ರತಿವರ್ಷ ಹೋಗುತ್ತೇನೆ. ದೈವಾರಾಧನೆ, ಭೂತಗಳಿಗೆ ಪೂಜೆ ಮಾಡುತ್ತೇವೆ. ಕೋಲ ಮಾಡಿಸುತ್ತೇವೆ. ಕೊನೆಯ 20 ಸಿನಿಮಾ ಅದ್ಭುತ. ರಿಷಬ್ ಶೆಟ್ಟಿಗೆ ಸಿನಿಮಾದ ಮೇಲಿನ ಪ್ಯಾಷನ್ ಗೊತ್ತಾಗುತ್ತದೆ. ಕಂಟೆಂಟ್ ಸ್ಟ್ರಾಂಗ್ ಆಗಿದೆ. ದೃಶ್ಯ ವೈಭವವಿದೆ. ಕಂಟೆಂಟ್ ಈಸ್ ಕಿಂಗ್ ಎನ್ನುವುದು ಮತ್ತೆ ಸಾಭೀತಾಗಿದೆ. ಎಷ್ಟು ದೊಡ್ಡ ಮಟ್ಟದ ಜನ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ’ ಎಂದು ಹೇಳಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!