TECH | ವಾಟ್ಸಾಪ್ ನಲ್ಲಿ ಡಿಲೀಟ್ ಮಾಡಿರೋ ಮೆಸೇಜ್ ಓದೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್

ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ ಗಳಲ್ಲಿ ವಾಟ್ಸಾಪ್ ಕೂಡ ಒಂದು. ಮೆಟಾ ಮಾಲೀಕತ್ವದ ಈ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನು ಅಪ್ಡೇಟ್ ಮಾಡುತ್ತಿರುತ್ತದೆ.

ಬಳಕೆದಾರರ ಗೌಪ್ಯತೆಗೆ ವಾಟ್ಸಾಪ್ ಹಲವು ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರಲ್ಲಿ ಒಂದು ‘ಡಿಲೀಟ್ ಫಾರ್ ಎವರಿವನ್’. ತಪ್ಪಾಗಿ ಕಳುಹಿಸಲಾದ ಮೆಸೇಜ್ ಅನ್ನು ಅಳಿಸಲು ಡಿಲೀಟ್ ಫಾರ್ ಎವರಿವನ್ ಬಳಸುತ್ತಾರೆ. ನೀವು ಸಂದೇಶ ಕಳುಹಿಸುತ್ತಿರುವ ವ್ಯಕ್ತಿಗೆ ಓದುವ ಮೊದಲೇ ಈ ಮೆಸೇಜ್ ಡಿಲೀಟ್​ ಮಾಡಿದ್ರೆ, ಅದನ್ನು ಓದಲು ಕೂಡ ನಿಮಗೆ ಸಾಧ್ಯವಿಲ್ಲ.

ಆದರೆ ಈ ಅಳಿಸಿದ ಸಂದೇಶಗಳನ್ನು ವೀಕ್ಷಿಸಲು ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಹಲವು ಅಪ್ಲಿಕೇಶನ್‌ ಗಳಿವೆ. ಆ ಆಪ್ ಮೂಲಕ ನೀವು ಅಳಿಸಿದ ಸಂದೇಶಗಳನ್ನು ಓದಬಹುದು. ಆ ಅಪ್ಲಿಕೇಶನ್‌ ಗಳನ್ನು ಬಳಸುವುದರಿಂದ ಕೆಲವೊಮ್ಮೆ ನಿಮ್ಮ ಪ್ರಮುಖ ಮಾಹಿತಿಯನ್ನು ಕದಿಯುವ ಅಪಾಯವಿದೆ. ಇಲ್ಲಿ ಇವತ್ತು ನಾವು ನೀಡುತ್ತಿರೋ ಮಾಹಿತಿ ಇಂತಹ ಯಾವುದೇ ಅಪಾಯಗಳನ್ನು ತಂದೊಡ್ಡುವುದಿಲ್ಲ.

ಮೊದಲು, ಫೋನ್ ಸೆಟ್ಟಿಂಗ್‌ ಗಳಿಗೆ ಹೋಗಿ. ಮುಂದೆ ನೋಟಿಫಿಕೇಷನ್​ ಗೆ ಹೋಗಿ. ಅಲ್ಲೇ ನೋಟಿಫಿಕೇಷನ್​ ಹಿಸ್ಟರಿ ಇತಿಹಾಸವನ್ನು ಪರಿಶೀಲಿಸಿ.

ಸ್ಕ್ರೀನ್​ ಮೇಲೆ ಗೋಚರಿಸುವ ಟಾಗಲ್ ಒತ್ತಿರಿ. ಈ ಬಟಲ್ ಒತ್ತುವ ಮೂಲಕ ನೀವು ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದಾಗ, ಕಳೆದ 24 ಗಂಟೆಗಳಲ್ಲಿ ನಿಮ್ಮ ಫೋನ್‌ನಲ್ಲಿ ನೀವು ಸ್ವೀಕರಿಸಿದ ಎಲ್ಲಾ ಸಂದೇಶಗಳನ್ನು ನೀವು ನೋಡಲು ಸಾಧ್ಯವಾಗುತ್ತದೆ.

ಜೊತೆಗೆ “ಡಿಲೀಟ್” ಎಂಬ ಸಂದೇಶವೂ ಇರುತ್ತದೆ. ಆದರೆ ನೀವು ಫೋಟೋಗಳು, ವೀಡಿಯೊಗಳು ಅಥವಾ ಆಡಿಯೋ ಸಂದೇಶಗಳನ್ನು ವೀಕ್ಷಿಸಲು ಸಾಧ್ಯವಿಲ್ಲ. ನೀವು ಟೆಕ್ಸ್ಟ್​ ಸಂದೇಶಗಳನ್ನು ಮಾತ್ರ ವೀಕ್ಷಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!